ಕುಮಟಾ-ಶಿರಸಿ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಸಂಚರಿಸುತ್ತದ್ದ ಸರ್ಕಾರಿ ಬಸ್ಸು ಗುರುವಾರ ರಾತ್ರಿ ಕಂದಕಕ್ಕೆ ಬಿದ್ದಿದ್ದು, ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಜೊತೆಗೆ 19 ಪ್ರಯಾಣಿಕರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಭಟ್ಕಳ ಅಜಾದನಗರದ ಪರ್ವಿನ ಬಾನು ಗಿಲಾನಿ ನಲಬಂದ (40) ಅವರು ಸಾವನಪ್ಪಿದವರಗಿದ್ದಾರೆ. ಉಡುಪಿ ಘಟಕಕ್ಕೆ ಸೇರಿದ ಈ ಬಸ್ಸು ಸವದತ್ತಿಯಿಂದ ಶಿರಸಿ ಮಾರ್ಗವಾಗಿ ಕುಮಟಾ ಮೂಲಕ ಉಡುಪಿಗೆ ಹೋಗುವಾಗ ಅವಘಡ ನಡೆದಿದೆ. ಚಾಲಕನ ಅತಿವೇಗವೇ ಈ ಅನಾಹುತಕ್ಕೆ ಕಾರಣವಾಗಿದ್ದು, ಬಸ್ಸು ಸಂಪೂರ್ಣವಾಗಿ ಪಲ್ಟಿಯಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಪರ್ವಿನ ಬಾನು ಅವರನ್ನು ಆಂಬುಲೆನ್ಸಿನ ಮೂಲಕ ಶಿರಸಿಗೆ ಒಯ್ಯುವ ಪ್ರಯತ್ನ ನಡೆಯಿತು. ಆದರೆ, ರಾಗಿಹೊಸಳ್ಳಿ ಬಳಿ ಅವರು ಕೊನೆಯುಸಿರೆಳೆದರು.
ಈ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕುಮಟಾ ಹೊಲನಗದ್ದೆಯ ಮಹೇಶ ವೆಂಕಟೇಶ ರೇವಣಕರ, ಕುಮಟಾ ಮೊರಬಾ ಗ್ರಾಮದ ದಯಾನಂದ ದಾಕಪ್ಪ ಹೊಸಮನಿ, ಆದರ್ಶ ದಯಾನಂದ ಹೊಸಮನೆ, ಪ್ರೇಮಾ ದಯಾನಂದ ಹೊಸಮನೆ, ಅಮೃತ ದಯಾನಂದ ಹೊಸಮನೆ, ಮುರಡೇಶ್ವರದ ಸೂಪಿಯಾನ್ ತನ್ವೀರ ಶೇಖ ಅವರು ಪ್ರಯಾಣಿಸುತ್ತಿದ್ದರು. ಅವರೊಂದಿಗೆ ಕುಮಟಾ ಧಾರೇಶ್ವರದ ಸತ್ಯನಾರಾಯಣ ಮಂಗೇಶ ದೇಶಭಂಡಾರಿ, ಕುಮಟಾ ಕಾಗಾಲದ ಶ್ರೀಮತಿ ಶಾಹಿನ್ ಅಲಿ ಅಕ್ಬರ ಪೋಸಗೆ, ಶ್ರೀಮತಿ ಅಕ್ಬರಿ ಮುಸ್ತಾಕ ಪೋಸಗೆ, ಅಂಕೋಲಾ ಮಂಜಗುಣಿಯ ನಿತ್ತಾನಂದ ನಾಗೇಶ ನಾಯ್ಕ, ಪವಿತ್ರಾ ವಿಠೋಬ ನಾಯ್ಕ, ಹಳಿಯಾಳ ಜಟಕಾಹೊಸೂರಿನ ಸುರೇಖಾ ಲಿಯೋ ಸಿದ್ದಿ, ಯಲ್ಲಾಪುರ ತಾವರಕಟ್ಟಾದ ಜೂಜೆಪ್ಪಿನ್ ಸಂತೋಷ ಸಿದ್ದಿ ಅವರು ಸಹ ಇದ್ದರು. ಅವರೆಲ್ಲರಿಗೂ ಅಪಘಾತದಲ್ಲಿ ಗಾಯವಾಗಿದೆ.
ಜೊತೆಗೆ ನವಲಗುಂದ ಅಳಗವಾಡಿಯ ಶಿವಾನಂದ ಸೊಮಪ್ಪ ರಂಗಣ್ಣವರ, ಮುಡೇಶ್ವರದ ರಾಜೇಶ ಸರಸಪ್ಪ ಸಾಳುಂಕೆ, ಪಾಂಡುರAಗ ಹನುಮಂತಪ್ಪ ಸಾಳುಂಕೆ, ಕಾರ್ಕಳದ ರಾಘವೇಂದ್ರ ಮೋಹನ ನಾಯಕ, ಭಟ್ಕಳ ಅಜಾದನಗರದ ಜಾಪರ್ ಎಜಾಜ್ ಅಹಮ್ಮದ ಹಾಗೂ ಈ ಬಸ್ನ ಚಾಲಕ ರಾಮದುರ್ಗದ ರಮೇಶ ಮಾಡಿಗೆಪ್ಪ ಅಂಬಿಗೇರಿ ಅವರು ಸಹ ಬಸ್ಸಿನ ಪ್ರಯಾಣಿಕರಾಗಿದ್ದು, ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.