`ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ ಗೆಲುವು ಸಾಧಿಸಿದ್ದ ಆದಿವಾಸಿಗಳು ಈಗಲೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಲೇ ಇದ್ದಾರೆ. ಭಾರತದಲ್ಲಿ 13 ಕೋಟಿ ಆದಿವಾಸಿ ಸಮುದಾಯದವರಿದ್ದರೂ ಆಡಳಿತದಲ್ಲಿರುವವರು ಅವರ ಹಕ್ಕುಗಳಿಗೆ ಮನ್ನಣೆ ಕೊಟ್ಟಿಲ್ಲ’ ಎಂದು ಆದಿವಾಸಿ ಅಧಿಕಾರ ರಾಷ್ಟ್ರೀಯ ಮಂಚ್’ನ ಅಧ್ಯಕ್ಷರೂ ಆಗಿರುವ ತ್ರಿಪೂರಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಿತೇಂದ್ರ ಚೌಧರಿ ಅವರು ವಿಷಾಧವ್ಯಕ್ತಪಡಿಸಿದ್ದಾರೆ.
ADVERTISEMENT
ಯಲ್ಲಾಪುರದ ಕಾರ್ಮಿಕ ಭವನದಲ್ಲಿ `ಆದಿವಾಸಿಗಳ ರಾಜ್ಯ ಸಮ್ಮೇಳನ’ ನಡೆದಿದ್ದು, ಅದರಲ್ಲಿ ಅವರು ಭಾಗವಹಿಸಿದ್ದಾರೆ. ಗುಮಟೆಪಾಂಗ್ ಬಡಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಆದಿವಾಸಿಗಳ ಹಕ್ಕು ರಕ್ಷಣೆ ಹಾಗೂ ಸಂಘರ್ಷಗಳ ಕುರಿತು ಸಮಗ್ರವಾಗಿ ಮಾತನಾಡಿದ್ದಾರೆ. ಮುಖ್ಯವಾಗಿ `ಅಂಬಾನಿ ಹಾಗೂ ಅದಾನಿಗಳಿಗೆ ಭೂಮಿ ನೀಡುವ ಕೇಂದ್ರ ಸರ್ಕಾರ ಆದಿವಾಸಿಗಳ ಬದುಕಿನ ಹಕ್ಕಿಗಾಗಿ ಜಮೀನು ನೀಡುತ್ತಿಲ್ಲ’ ಎಂದವರು ಆಕ್ಷೇಪಿಸಿದ್ದಾರೆ. `ಆದಿವಾಸಿಗಳು ಭಾರತದ ಮೂಲ ನಿವಾಸಿಗಳಾಗಿದ್ದು, ಇಲ್ಲಿನ ಜನ ಜೀವನದ ಜೊತೆ ಹಾಸುಹೊಕ್ಕಾಗಿದ್ದಾರೆ. 13 ಕೋಟಿ ಆದಿವಾಸಿ ಜನರಿದ್ದು, 700ಕ್ಕೂ ಅಧಿಕ ಸಮುದಾಯಗಳಿವೆ. 500ಕ್ಕೂ ಅಧಿಕ ಭಾಷೆ ಮಾತನಾಡುವ ಆದಿವಾಸಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಬೇಕಿದೆ’ ಎಂದವರು ಪ್ರತಿಪಾಧಿಸಿದ್ದಾರೆ.
ADVERTISEMENT
`ನರೇಂದ್ರ ಮೋದಿ ಆಡಳಿತ ಬಂದ ನಂತರ ದೇಶದಲ್ಲಿ ಒಂದು ಲಕ್ಷ ಶಾಲೆಗಳಿಗೆ ಬೀಗ ಬಿದ್ದಿದೆ. ಮೋದಿ ಸರ್ಕಾರ ಹೇಳಿದ್ದೇ ಬೇರೆ..ಮಾಡಿದ್ದೇ ಬೇರೆ’ ಎಂದು ಅವರು ಟೀಕಿಸಿದ್ದಾರೆ. `ಶಿಕ್ಷಣ-ಉದ್ಯೋಗ ಮಾರುಕಟ್ಟೆ ಅಸ್ತವ್ಯಸ್ಥವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಆದಿವಾಸಿಗಳನ್ನು ಬಡತನಕ್ಕೆ ನೂಕಲಾಗುತ್ತಿದೆ’ ಎಂದವರು ಹೇಳಿದ್ದಾರೆ. ಸಂಘಟನೆಯ ರಾಜ್ಯ ಸಹ ಸಂಚಾಲಕ ಗುರುಶಾಂತ, ಪ್ರಮುಖರಾದ ಬಿ ಎನ್ ವಾಸರೆ, ಜಾನ್ ಬಿಳ್ಕಿಕರ, ಸುಭಾಸ ಗಾವಡಾ, ಹನುಮಂತ ಗಾವಡಾ , ಇಬ್ರಾಹಿಂ, ಶಾಂತಾರಾA ನಾಯಕ, ಯಮುನಾ ಗಾಂವ್ಕರ, ಬೊಜ್ಜು ಪಿಂಗಳೆ, ನಾರಾಯಣ ಕುಣಬಿ, ವೆಂಕಟರಮಣ ಗೌಡ, ಪ್ರೇಮಾನಂದ ವೇಳೀಪ, ಬೀರಣ್ಣಾ ನಾಯಕ ಮೊಗಟಾ, ಶಾಂತಾರಾಮ ನಾಯಕ, ಲಕ್ಷೀ ಸಿದ್ದಿ ಅವರು ವೇದಿಕೆಯಲ್ಲಿದ್ದು, ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ.