ಕಣ್ಣಿಗೇರಿಯ ತಿಮ್ಮಾಪುರದಲ್ಲಿ ವಿದ್ಯುತ್ ತಂತಿ ಕೆಳಗೆ ಬೆಳೆದಿದ್ದ ಗಿಡ-ಮರ ಕಟಾವು ಕೆಲಸ ಮಾಡುತ್ತಿದ್ದ ರತ್ನಪ್ಪ ಲಮಾಣಿ ಅವರು ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ್ದಾರೆ. ಈ ಕೆಲಸದ ಜವಾಬ್ದಾರಿವಹಿಸಿಕೊಂಡಿದ್ದ ಗುತ್ತಿಗೆದಾರ, ಮೇಲ್ವಿಚಾರಕ ಹಾಗೂ ಮ್ಯಾನೇಜರ್ ನಿರ್ಲಕ್ಷವೇ ರತ್ನಪ್ಪ ಲಮಾಣಿ ಅವರ ಸಾವಿಗೆ ಕಾರಣವಾಗಿದೆ.
ADVERTISEMENT
ಧಾರವಾಡ ಜಿಲ್ಲೆಯ ಕಲಘಟಗಿಯ ರತ್ನಪ್ಪ ಲಮಾಣಿ ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೆಲಸ ಅರೆಸಿ ಅವರು ಯಲ್ಲಾಪುರಕ್ಕೆ ಬಂದಿದ್ದರು. ಅಕ್ಟೋಬರ್ 24ರಂದು ಮಧ್ಯಾಹ್ನ 12.30ರ ಸುಮಾರಿಗೆ ಅವರು ನಾಜಗೇರಿ-ಕೊಡಸೆ ಹೈಪವರ್ ವಿದ್ಯುತ್ ಮಾರ್ಗದ ಕೆಳಗೆ ಬೆಳೆದಿದ್ದ ಗಿಡಮರಗಳ ಟೊಂಗೆಗಳನ್ನು ಕಡಿತ ಮಾಡುತ್ತಿದ್ದರು. ಅವರ ಜೊತೆ ಮತ್ತೆ 12 ಜನ ಕಾರ್ಮಿಕರು ಅಲ್ಲಿ ದುಡಿಯುತ್ತಿದ್ದರು.
ADVERTISEMENT
ಈ ವೇಳೆ ವಿದ್ಯುತ್ ಮಾರ್ಗದ ಕೆಳಗೆ ಕೆಲಸ ಮಾಡುತ್ತಿದ್ದ ರತ್ನಪ್ಪ ಲಮಾಣಿ ಅವರ ಕೈಯಲ್ಲಿದ್ದ ಬಿದಿರಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿತು. ಬಿದಿರಿನ ಮೂಲಕ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲೇ ಸಾವನಪ್ಪಿದರು. ಗುತ್ತಿಗೆದಾರ ಅಚ್ಯುತನ್ ಶ್ರೀನಿವಾಸ ಹಾಗೂ ಪವರ್ ಗ್ರಿಡ್ನ ಮೇಲ್ವಿಚಾರಕ ಹಾಗೂ ಮ್ಯಾನೇಜರ್ ಅವರ ನಿರ್ಲಕ್ಷ್ಯವೇ ಪತಿಯ ಸಾವಿಗೆ ಕಾರಣ ಎಂದು ಗಿರಿಜಾ ರತ್ನಪ್ಪ ಲಮಾಣಿ ಅವರು ದೂರಿದ್ದಾರೆ.