ತಾರಿಮಕ್ಕಿಯ ಪವನ್ ಆಚಾರಿ ಅವರು ಏಕಾಏಕಿ ರಥಬೀದಿಯಲ್ಲಿರುವ ಸುಧಾ ಹೊಸಮನೆ ಅವರ ಮನೆಗೆ ನುಗ್ಗಿದ್ದು, ಅವರ ಮೊಬೈಲ್ ಕಸಿದು ಅದನ್ನು ಪುಡಿ ಪುಡಿ ಮಾಡಿದ್ದಾರೆ. ಸಿಟ್ಟಿನಲ್ಲಿದ್ದ ಪವನ್ ಆಚಾರಿ ಅವರು ಸುಧಾ ಹೊಸಮನಿ ಅವರ 18 ಸಾವಿರ ರೂ ಮೌಲ್ಯದ ಮೊಬೈಲ್ ಹಾಳು ಮಾಡಿದ್ದಾರೆ.
ಗೋಕರ್ಣದ ರಥಬೀದಿಯಲ್ಲಿ ಸುಧಾ ರಾಮಚಂದ್ರ ಹೊಸಮನೆ ಅವರು ವಾಸವಾಗಿದ್ದಾರೆ. 29 ವರ್ಷ ಅವರು ಮನೆ ಕೆಲಸ ಮಾಡಿಕೊಂಡಿದ್ದಾರೆ. ಅಕ್ಟೊಬರ್ 4ರಂದು ಸುಧಾ ಹೊಸಮನಿ ಅವರ ಮನೆಗೆ ದಿನೇಶ ನಾಯ್ಕ ಅವರು ಆಗಮಿಸಿದ್ದಾರೆ. ದಿನೇಶ ನಾಯ್ಕ ಅವರು ಅಲ್ಲಿ ಬಂದಿರುವುದನ್ನು ಸಹಿಸದ ತಾರಿಮಕ್ಕಿಯ ಪವನ ಸತೀಶ್ ಆಚಾರಿ ಅವರು ಆ ಮನೆಗೆ ಬಂದು ಗಲಾಟೆ ಮಾಡಿದ್ದಾರೆ.
ಏಕಾಏಕಿ ಸುಧಾ ಹಸಮನಿ ಅವರ ಮನೆಗೆ ನುಗ್ಗಿದ ಪವನ್ ಆಚಾರಿ ಅವರು `ದಿನೇಶ ನಾಯ್ಕ ಅವರನ್ನು ಏಕೆ ಕರೆಯಿಸಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ. ಮನೆಯೊಳಗಿದ್ದ ಖುರ್ಚಿಯಿಂದ ಸುಧಾ ಹೊಸಮನಿ ಅವರಿಗೆ ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಆಗ, ದಿನೇಶ ನಾಯ್ಕ ಅವರು ಅಡ್ಡಬಂದು ಸುಧಾ ಹೊಸಮನಿ ಅವರನ್ನು ಕಾಪಾಡಿದ್ದಾರೆ. ಅದಾದ ನಂತರ ಸುಧಾ ಹೊಸಮನಿ ಅವರ ಕೈಯಲ್ಲಿದ್ದ ಮೊಬೈಲ್ ಕಸಿದ ಪವನ್ ಆಚಾರಿ ಅವರು ಅದನ್ನು ನೆಲಕ್ಕೆ ಹೊಡೆದು ಪುಡಿಪುಡಿ ಮಾಡಿದ್ದಾರೆ.
ಅದಾದ ನಂತರ ಪವನ್ ಆಚಾರಿ ಅವರು ಸುಧಾ ಹೊಸಮನಿ ಅವರಿಗೆ ನಿಂದಿಸಿದ್ದಾರೆ. ದಿನೇಶ್ ನಾಯ್ಕ ಅವರಿಗೂ `ಗತಿ ಕಾಣಿಸುವೆ’ ಎಂದು ಹೆದರಿಸಿದ್ದಾರೆ. `ಎರಡು ದಿನದ ನಂತರ ಏನು ಮಾಡಬೇಕು ಎಂದು ಗೊತ್ತಿದೆ’ ಎಂದು ಹೇಳಿ ಅಲ್ಲಿಂದ ಹೊರಟಿದ್ದಾರೆ. ಮನೆಯೊಳಗೆ ನುಗ್ಗಿ ಮಹಿಳೆಗೆ ನಿಂದಿಸಿದಲ್ಲದೇ, ಅವರ 18 ಸಾವಿರ ರೂ ಮೌಲ್ಯದ ಮೊಬೈಲ್ ಒಡೆದು ಹಾಳು ಮಾಡಿದ ಕಾರಣ ಪೊಲೀಸರು ಪವನ್ ಆಚಾರಿ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಸುಧಾ ಹೊಸಮನಿ ಅವರ ದೂರು ಆಲಿಸಿ, ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.