ಶಿರಸಿ ಅಯ್ಯಪ್ಪನಗರ ಬಳಿಯ ಶರದ್ ಬೋರಕರ್ ಅವರು ಸತ್ತವರ ಹೆಸರಿನಲ್ಲಿದ್ದ ಬೈಕ್’ನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ಸಾವನಪ್ಪಿದವರ ಸಹಿ ಪೋರ್ಜರಿ ಮಾಡಿದ್ದಾರೆ!
ಶಿರಸಿಯ ಅಯ್ಯಪ್ಪನಗರದ ಚೌಡೇಶ್ವರಿ ಕಾಲೋನಿಯಲ್ಲಿ ಶರದ್ ಪ್ರಭಾಕರ ಬೋರಕರ್ ಅವರು ವಾಸವಾಗಿದ್ದಾರೆ. 35 ವರ್ಷದ ಅವರಿಗೆ ರಾಯಲ್ ಎನ್‌ಪಿಲ್ಡ್ ಬೈಕಿನ ಬಗ್ಗೆ ಅಪಾರ ಆಸಕ್ತಿ. ಹೀಗಾಗಿ ಅವರು ಸಾವನಪ್ಪಿದ ತಮ್ಮ ಸಹೋದ ಸಂದೇಶ ಬೋರಕರ್ ಅವರ ಸಹಿ ಪೊರ್ಜರಿ ಮಾಡಿದ್ದಾರೆ. ಸಂದೇಶ ಬೋರಕರ್ ಅವರು ಸಾವನಪ್ಪಿ ಒಂದು ವರ್ಷದೊಳಗೆ ನಕಲಿ ದಾಖಲೆಗಳ ಮೂಲಕ ಆ ಬೈಕನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.
2024ರ ಸೆಪ್ಟೆಂಬರ್ 7ರಂದು ಸಂದೇಶ ಬೋರಕರ್ ಅವರ ಕೊಲೆಯಾಗಿದೆ. ಕಾರವಾರದಲ್ಲಿ ಅವರು ಸಾವನಪ್ಪಿದ್ದಾರೆ. ಆದರೆ, ಶರದ್ ಬೋರಕರ್ ಅವರು 2025ರ ಜುಲೈ 10ರಂದು ಸಂದೇಶ ಬೋರಕರ್ ಅವರ ಸಹಿ ಪೊರ್ಜರಿ ಮಾಡಿದ್ದಾರೆ. ನಕಲಿ ಸಹಿ ಹಾಗೂ ನಕಲಿ ದಾಖಲೆ ಸೃಷ್ಠಿಸಿ ಬೈಕ್ ವರ್ಗಾಯಿಸಿಕೊಂಡ ವಿಷಯ ಸಂದೇಶ ಬೋರಕರ್ ಅವರ ಪತ್ನಿ ನಳನ ಬೋರಕರ್ ಅವರಿಗೆ ಗೊತ್ತಾಗಿದೆ.
ಶಿವಮೊಗ್ಗ ಹೊಸನಗರ ಮೂಲದ ನಳನ ಬೋರಕರ್ ಅವರು ಮೈಸೂರಿನ ಎಡಿಎಲ್‌ಆರ್ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ತಮ್ಮ ಪತಿ ಹೆಸರಿನಲ್ಲಿದ್ದ ಬೈಕನ್ನು ನಕಲಿ ದಾಖಲೆ ಹಾಗೂ ಪೋರ್ಜರಿ ಸಹಿ ಮೂಲಕ ವರ್ಗಾಯಿಸಿದ ಶರದ್ ಬೋರಕರ್ ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.