ತಮಿಳುನಾಡಿನಿಂದ ಗೋವಾ ಕಡೆಗೆ ಹೋಗುವ ರೈಲಿನಲ್ಲಿದ್ದ ದಂಪತಿ 1.48 ಲಕ್ಷ ರೂ ಮೌಲ್ಯದ ಸಾಮಗ್ರಿ ಕಳೆದುಕೊಂಡಿದ್ದಾರೆ. ಆ ದಂಪತಿಯ ಬ್ಯಾಗ್’ನ್ನು ಕಳ್ಳರು ಅಪಹರಿಸಿದ್ದಾರೆ.
ADVERTISEMENT
ಕಾರವಾರದ ಅಸ್ನೋಟಿ ರೈಲು ನಿಲ್ದಾಣದ ಬಳಿ ದಂಪತಿಯ ಬ್ಯಾಗ್ ಕಾಣೆಯಾಗಿದೆ. ತಮಿಳುನಾಡಿನ ತಿರುವನೆಲ್ವೇಲಿ ಜಿಲ್ಲೆಯ ಐ. ಜಾನ್ ಥಾಮಸ್ ಅವರು ತಮ್ಮ ಪತ್ನಿ ಜೊತೆ ಸಂಚರಿಸುವಾಗ ಅವರ ಬಳಿಯಿದ್ದ ಸಾಮಗ್ರಿಗಳು ಕಾಣೆಯಾಗಿವೆ. ಅವರು ಸೆಪ್ಟೆಂಬರ್ 30ರಂದು ತಿರುನೆಲ್ವೇಲಿ ಜಂಕ್ಷನ್ನಿAದ ಮಡಗಾಂವ್ ಜಂಕ್ಷನ್ಗೆ ಪ್ರಯಾಣ ಬೆಳೆಸಿದ್ದು, ಆ ವೇಳೆಯಲ್ಲಿಯೇ ಸಮಸ್ಯೆ ಅನುಭವಿಸಿದ್ದಾರೆ.
ADVERTISEMENT
ಅಕ್ಟೋಬರ್ 1ರಂದು ಬೆಳಗಿನ ಜಾವ 3:30ರ ಸುಮಾರಿಗೆ ಕಾರವಾರದ ಅಸ್ನೋಟಿ ರೈಲ್ವೆ ನಿಲ್ದಾಣದಲ್ಲಿ ಕ್ರಾಸಿಂಗ್ಗಾಗಿ ರೈಲು ನಿಂತಿದ್ದ ವೇಳೆ ಅಪರಿಚಿತ ವ್ಯಕ್ತಿಯ ಆಗಮನವಾಗಿದೆ. ಆ ಅಪರಿಚಿತ ವ್ಯಕ್ತಿ ದಂಪತಿ ಬಳಿಯಿದ್ದ 1,48,399 ರೂ ಮೌಲ್ಯದ ಸಾಮಗ್ರಿ ಕದ್ದು ಪರಾರಿಯಾಗಿದ್ದಾರೆ. ಅದರೊಂದಿಗೆ ಅವರ ಬಳಿಯಿದ್ದ ಬಿಳಿ ಬಣ್ಣದ ಕೈ ಚೀಲವನ್ನು ಕದ್ದಿದ್ದು, ಆ ದಂಪತಿ ಇದೀಗ ಎಲ್ಲಾ ವಸ್ತುಗಳ ಹುಡುಕಾಟ ನಡೆಸಿದ್ದಾರೆ.
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
ಘಟನೆ ಕುರಿತು ಜಾನ್ ಥಾಮಸ್ ಅವರು ಅಕ್ಟೋಬರ್ 2ರಂದು ಗೋವಾದ ಮಡಗಾಂವ್ ಕೊಂಕಣ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ದೂರು, ಸದ್ಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಗೆ ವರ್ಗವಾಗಿದೆ. ಪೊಲೀಸರು ಆ ಅಪರಿಚಿತನ ಹುಡುಕಾಟ ನಡೆಸಿದ್ದಾರೆ.