ಅಘನಾಶಿನಿ ಗಜನಿ ದಡದ ಮೇಲೆ ಅಂದರ್ ಬಾಹರ್ ಆಟ ಜೋರಾಗಿದೆ. ಲುಕ್ಕೇರಿಯ ಈಶ್ವರ ಗೌಡ ಅವರು ತಮ್ಮ ಸಹಚರರ ಜೊತೆ ಅಲ್ಲಿ ಜೂಜಾಟ ನಡೆಸಿದಾಗ ಪೊಲೀಸರು ದಾಳಿ ಮಾಡಿದ್ದಾರೆ.
ಅಕ್ಟೊಬರ್ 25ರ ಸಂಜೆ ಕುಮಟಾದ ಲಕ್ಕೂರಿ ಗ್ರಾಮದ ಅಘನಾಶಿನಿ ದಂಡೆ ಮೇಲೆ ಅಂದರ್ ಬಾಹರ್ ಆಟ ನಡೆದ ಬಗ್ಗೆ ಪೊಲೀಸರಿಗೆ ಫೋನ್ ಬಂದಿದೆ. ಆ ಮಾಹಿತಿ ಅನ್ವಯ ಪಿಸೈ ರವಿ ಗುಡ್ಡಿ ಅವರು ತಮ್ಮ ತಂಡದೊAದಿಗೆ ಅಲ್ಲಿಗೆ ತೆರಳಿದ್ದಾರೆ. ಆಗ, ಲುಕ್ಕೇರಿಯ ಅಣ್ಣಪ್ಪ ಈಶ್ವರ ಗೌಡ, ಲೋಕೇಶ್ವರ ದೇವು ಗೌಡ, ರಾಘು ಲಿಂಗಪ್ಪ ಗೌಡ ಅವರ ಜೊತೆ ಮಾಸೂರಿನ ರಾಘವ ಬೊಬ್ಬು ಪಟಗಾರ ಹಾಗೂ ಹೆಗಡೆ ಮಚಗೋಣದ ಗಣಪತಿ ಮಾಸ್ತಿ ಮುಕ್ರಿ ಅಲ್ಲಿ ಕಾಣಿಸಿದ್ದಾರೆ. ಅವರೆಲ್ಲರೂ ಸೇರಿ ಇಸ್ಪಿಟ್ ಎಲೆಗಳ ಮೇಲೆ ಹಣಹೂಡಿ ಆಟವಾಡುತ್ತಿದ್ದು, ಪೊಲೀಸರು ದಿಢೀರ್ ಆಗಿ ದಾಳಿ ಮಾಡಿದ್ದಾರೆ.
ದಾಳಿ ಮಾಡಿದ ಪೊಲೀಸರಿಗೆ ಅಲ್ಲಿ 3890ರೂ ಹಣ ಸಿಕ್ಕಿದೆ. ಜೊತೆಗೆ ಇಸ್ಪಿಟ್ ಕಾರ್ಡು, ತಾಡಪತ್ರೆಗಳನ್ನು ಅವರು ವಶಕ್ಕೆಪಡೆದಿದ್ದಾರೆ. ದಾಳಿ ವೇಳೆ ಲುಕ್ಕೇರಿ ಅಶ್ವಥಕಟ್ಟೆ ಬಳಿಯ ರಾಘು ಲಿಂಗಪ್ಪ ಗೌಡ ಅವರು ಓಡಿ ಪರಾರಿಯಾಗಿದ್ದಾರೆ. ಅದಾಗಿಯೂ, ಪೊಲೀಸರು ಸಿಕ್ಕಿಬಿದ್ದವರ ಜೊತೆ ಓಡಿಹೋದವರ ಹೆಸರನ್ನು ದಾಖಲಿಸಿ ಕೇಸು ಮಾಡಿದ್ದಾರೆ. ಜೂಜಾಟದಿಂದ ಜೀವನ ಹಾಳಾದವರ ನಿದರ್ಶನ ನೀಡಿ ಬುದ್ದಿಮಾತನ್ನು ಹೇಳಿದ್ದಾರೆ.