ಆಳ ಸಮುದ್ರದಲ್ಲಿ ಸಿಗುವ ಚಮನ್ ಜಾತಿಯ ಮೀನು ಕೊಳೆತ ವಾಸನೆಗೆ ತದಡಿಯಲ್ಲಿ ಮೂವರು ಮೀನುಗಾರಿಕಾ ಕಾರ್ಮಿಕರು ಸಾವನಪ್ಪಿದ್ದಾರೆ. ಸಾವನಪ್ಪಿದವರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿಸಲಾಗಿದೆ.
ಕುಮಟಾ ಒನ್ನಳ್ಳಿಯ ಖುಜೈನಾ ಎಂಬ ಬೋಟು ಮೀನುಗಾರಿಕೆಗಾಗಿ ಅರಬ್ಬಿ ಸಮುದ್ರಕ್ಕೆ ಹೋಗಿತ್ತು. ಮಂಗಳವಾರ ಸಂಜೆ ಆ ಬೋಟು ತದಡಿ ಬಂದರಿಗೆ ಬಂದಿದ್ದು, ಬೋಟಿನಲ್ಲಿದ್ದ ಮೀನು ಖಾಲಿ ಮಾಡುವಾಗ ಕೆಟ್ಟ ವಾಸನೆ ಬಡಿಯಿತು. ಬೋಟಿನಲ್ಲಿದ್ದ ಮೀನುಗಳನ್ನು ಖಾಲಿ ಮಾಡಿ, ಬೋಟುಗಳನ್ನು ಸ್ವಚ್ಛ ಮಾಡುತ್ತಿದ್ದ ಮೂವರು ಕಾರ್ಮಿಕರು ಅಲ್ಲಿನ ಕಲುಷಿತ ಗಾಳಿ ಸೇವಿಸಿದ ಪರಿಣಾಮ ಕೊನೆಯುಸಿರೆಳೆದರು.
ಬೋಟಿನಲ್ಲಿದ್ದ ತ್ಯಾಜ್ಯ ತೆಗೆಯಲು ಹೋದ ಕಾರ್ಮಿಕರಿಗೆ ಚಮನ್ ಜಾತಿಯ ಮೀನಿನ ಕೊಳೆತ ತ್ಯಾಜ್ಯ ಮೂಗಿಗೆ ಬಡಿದಿದ್ದು, ಅವರು ಪ್ರಜ್ಞೆ ತಪ್ಪಿದರು. ಬೋಟಿನಲ್ಲಿದ್ದ ಕೋಲ್ಡ್ ಸ್ಟೋರೇಜ್ ಹೊಂಡಕ್ಕೆ ಬಿದ್ದ ನಾಲ್ವರಲ್ಲಿ ಒಬ್ಬರು ಅಲ್ಲಿಂದ ಪಾರಾಗಿ ಬಂದರು. ಉಳಿದ ಮೂವರು ಅಸ್ವಸ್ಥರಾಗಿದ್ದು, ಆಂಬುಲೆನ್ಸ ಮೂಲಕ ಅವರನ್ನು ಗೋಕರ್ಣ ಪ್ರಾಥಮಿಕ ಕೇಂದ್ರಕ್ಕೆ ತರಲಾಯಿತು. ಆದರೆ, ಅಷ್ಟರೊಳಗೆ ಆ ಮೂವರು ಸಾವನಪ್ಪಿದ್ದರು.
ಕುಮಟಾ ಕಾಗಾಲ ಹೆನಿಯ ನೌಶಾದ ಅಲಿರಾಜನ್ (35), ಒನ್ನಳ್ಳಿಯ ಅಮನ್ ಅಯುಬ್ ಲಿಂಗಾಡೂ (18) ಹಾಗೂ ಅಮೀರ ಅಬ್ದುಲ್ ಉಂಚಳ್ಳಿ (20) ಸಾವನಪ್ಪಿದ ಮೀನುಗಾರಿಕಾ ಕಾರ್ಮಿಕರಾಗಿದ್ದಾರೆ. ಬೆಟ್ಕುಳಿಯ ಅಬ್ದುಲ್ (55) ಜೀವಾಪಾಯದಿಂದ ಪಾರಾಗಿದ್ದಾರೆ. ವೈದ್ಯಾಧಿಕಾರಿ ಡಾ ಜಗದೀಶ ನಾಯ್ಕ, ಹಾಗೂ ಸಿಬ್ಬಂದಿ ತುರ್ತು ಚಿಕಿತ್ಸೆ ನಡೆಸಿದ ಕಾರಣ ಅಬ್ದುಲ್ ಅವರ ಪ್ರಾಣ ಉಳಿದಿದೆ. ಸಾವನಪ್ಪಿದವರೆಲ್ಲರೂ ಸಣ್ಣ ವಯಸ್ಸಿನವರಾಗಿದ್ದು, ಅವರೇ ಕುಟುಂಬಕ್ಕೆ ಆಧಾರವಾಗಿದ್ದರು. ಹೀಗಾಗಿ ಅವರ ಪಾಲಕರು ಸ್ಥಳಕ್ಕೆ ಆಗಮಿಸಿ ಆಕಂದ್ರನಹೊರಹಾಕಿದರು. ಸದ್ಯ ಕಂದಾಯ, ಪೊಲೀಸ್ ಸೇರಿ ವಿವಿಧ ಇಲಾಖೆಯವರು ಸ್ಥಳದಲ್ಲಿದ್ದಾರೆ.