ಗಣೇಶ ನಗರದ ನಾಗೇಶ ಬೋವಿವಡ್ಡರ್ ಅವರನ್ನು ಮದುವೆಯಾಗಿದ್ದ ರೇಣವ್ವ ಬೋವಿವಡ್ಡರ್ ಅವರು ತಮ್ಮ ನಾದಿನಿ ಸವಿತಾ ಬೋವಿವಡ್ಡರ್ ಅವರ ಕಾಟ ಸಹಿಸಲಾಗದೇ ಸಾವನಪ್ಪಿದ್ದಾರೆ. ತಿನ್ನರ್ ಕುಡಿದು ಅಸ್ವಸ್ಥರಾಗಿದ್ದ ರೇಣವ್ವ ಬೋವಿವಡ್ಡರ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದಿದ್ದು, ಅದು ಪ್ರಯೋಜನಕ್ಕೆ ಬಂದಿಲ್ಲ.
ಶಿರಸಿ ಗಣೇಶ ನಗರದಲ್ಲಿ ನಾಗೇಶ ಬೋವಿವಡ್ಡರ್ ಅವರು ವಾಸವಾಗಿದ್ದಾರೆ. 15 ವರ್ಷದ ಹಿಂದೆ ಅವರು ಗದಗದ ರೇಣವ್ವ ಬೋವಿವಡ್ಡರ್ ಅವರನ್ನು ಮದುವೆಯಾಗಿದ್ದಾರೆ. ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ 12 ವರ್ಷದ ಮಗುವಿದೆ. ನಾಗೇಶ ಬೋವಿವಡ್ಡರ್ ಅವರದ್ದು ಅವಿಭಕ್ತ ಕುಟುಂಬವಾಗಿದ್ದು, ತಮ್ಮ ತಂದೆ-ತಾಯಿ ಜೊತೆ ಅವರು ವಾಸವಾಗಿದ್ದಾರೆ. ಜೊತೆಗೆ ಸಹೋದರ ರಾಜು ಬೋವಿವಡ್ಡರ್ ಹಾಗೂ ಅವರ ಪತ್ನಿ ಸವಿತಾ ಬೋವಿವಡ್ಡರ್ ಸಹ ಅವರ ಜೊತೆಯಲ್ಲಿಯೇ ಇದ್ದಾರೆ.
ಕೆಲ ದಿನಗಳ ಹಿಂದೆ ಸವಿತಾ ಬೋವಿವಡ್ಡರ್ ಅವರು ಬಿಸಿ ನೀರು ಕಾಯಿಸಿದ್ದು, ಅದನ್ನು ರೇಣವ್ವ ಬೋವಿವಡ್ಡರ್ ಅವರು ಬಳಕೆ ಮಾಡಿದ್ದಾರೆ. ಇದೇ ವಿಷಯಕ್ಕೆ ಸವಿತಾ ಬೋವಿವಡ್ಡರ್ ಅವರು ರೇಣವ್ವ ಬೋವಿವಡ್ಡರ್ ಅವರನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಅದಾದ ನಂತರ ರಾಜು ಬೋವಿವಡ್ಡರ್ ಹಾಗೂ ಸವಿತಾ ಬೋವಿವಡ್ಡರ್ ದಂಪತಿ ಅನಗತ್ಯವಾಗಿ ರೇಣವ್ವ ಬೋವಿವಡ್ಡರ್ ಅವರ ವಿರುದ್ಧ ಜಗಳ ಶುರು ಮಾಡಿದ್ದಾರೆ. 15 ವರ್ಷಗಳಿಂದ ಗಂಡನ ಮನೆಯಲ್ಲಿ ಅನ್ಯೋನ್ಯವಾಗಿ ಬದುಕು ಕಟ್ಟಿಕೊಂಡಿದ್ದ ರೇಣವ್ವ ಬೋವಿವಡ್ಡರ್ ಅವರ ಮೇಲೆ ಈಚೆಗೆ ದಬ್ಬಾಳಿಕೆ ನಡೆದಿರುವುದು ಅವರ ತಾಯಿ ಲಕ್ಷವ್ವ ಬಂಡಿವಡ್ಡರ್ ಅವರ ಗಮನಕ್ಕೂ ಬಂದಿದೆ.
ರೇಣವ್ವ ಬೋವಿವಡ್ಡರ್ ಅವರನ್ನು ಅವರ ಕುಟುಂಬದವರೆಲ್ಲರೂ ದೂರ ಮಾಡಿದ್ದು, ಮಾತನಾಡುವುದನ್ನು ಬಿಟ್ಟಿದ್ದಾರೆ. ಅನಗತ್ಯವಾಗಿ ರೇಣವ್ವ ಬೋವಿವಡ್ಡರ್ ಅವರನ್ನು ಬೈಯುತ್ತಿರುವ ಬಗ್ಗೆ ಅವರು ತಾಯಿ ಬಳಿ ಹೇಳಿದ್ದಾರೆ. ಗಂಡನ ತಮ್ಮ ರಾಜು ಹಾಗೂ ನಾದಿನಿ ಸವಿತಾ ಅವರ ಕಿರುಕುಳದ ಬಗ್ಗೆಯೂ ರೇಣವ್ವ ಬೋವಿವಡ್ಡರ್ ಅವರು ತಾಯಿಯ ಬಳಿ ವಿವರಿಸಿದ್ದಾರೆ. ಅವರ ಕಾಟ ಸಹಿಸಲಾಗದೇ ರೇಣವ್ವ ಬೋವಿವಡ್ಡರ್ ಅವರು ಅಕ್ಟೊಬರ್ 13ರಂದು ತಿನ್ನರ್ ಕುಡಿದಿದ್ದಾರೆ. ಆ ದಿನ ರಾತ್ರಿ 11 ಗಂಟೆಗೆ ಅವರನ್ನು ಹುಬ್ಬಳ್ಳಿ ಕಿಮ್ಸ್ ಕರೆದೊಯ್ಯುವ ಪ್ರಯತ್ನ ನಡೆದಿದ್ದು, ದಾರಿ ಮದ್ಯೆಯೇ ಅವರು ಸಾವನಪ್ಪಿದ್ದಾರೆ.
ಈ ಸಾವಿನ ಬಗ್ಗೆ ಲಕ್ಷವ್ವ ಬಂಡಿವಡ್ಡರ್ ಅವರಿಗೆ ಅನುಮಾನ ಕಾಡಿದೆ. `ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಆ ಕುಟುಂಬದ ಪ್ರತಿಯೊಬ್ಬರನ್ನು ಕೂಲಂಕುಶವಾಗಿ ವಿಚಾರಿಸಬೇಕು. ರೇಣವ್ವ ಬೋವಿವಡ್ಡರ್ ಅವರ ಸಾವಿನ ಸತ್ಯ ಹೊರಬರಬೇಕು’ ಎಂದವರು ಪೊಲೀಸ್ ದೂರು ನೀಡಿದ್ದಾರೆ.