ಯಲ್ಲಾಪುರದ ಕಾರ್ಮಿಕ ಭವನದಲ್ಲಿ ಆದಿವಾಸಿಗಳ ರಾಜ್ಯ ಸಮ್ಮೇಳನ ಶುರುವಾಗಿದ್ದು, ಬುಡಕಟ್ಟು ಸಮುದಾಯದ ಪ್ರಮುಖರಿಗೆ ಆಮಂತ್ರಣ ಇಲ್ಲದ ಕಾರಣ ಅಸಮಧಾನ ಶುರುವಾಗಿದೆ. ಮುಖ್ಯವಾಗಿ ಸಿದ್ದಿ ಸಮುದಾಯದ ಮುಖಂಡರು ಹಾಗೂ ಸಂಘ-ಸoಸ್ಥೆಗಳನ್ನು ವಿಶ್ವಾಸಕ್ಕೆಪಡೆಯದ ಕಾರಣ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಜಿಲ್ಲಾ ಸದಸ್ಯ ಸುರೇಶ ಕೃಷ್ಣ ಸಿದ್ದಿ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ.
ADVERTISEMENT
`ಅಕ್ಟೊಬರ್ 25 ಹಾಗೂ 26ರಂದು ಯಲ್ಲಾಪುರದಲ್ಲಿ ಆದಿವಾಸಿಗಳನ್ನು ಒಗ್ಗೂಡಿಸಿ ಸಮ್ಮೇಳನ ನಡೆಸಲಾಗುತ್ತಿದೆ. ಆದಿವಾಸಿಗಳ ಸಬಲೀಕರಣ ಹಾಗೂ ಭೂಮಿ ಹಕ್ಕಿನ ಹೊರಾಟದ ವಿಷಯವಾಗಿ ಸಮ್ಮೇಳನ ನಡೆಯುತ್ತಿದೆ. ಆದರೆ, ಇಲ್ಲಿನ ಮುಖ್ಯ ಸಮುದಾಯವಾದ ಸಿದ್ದಿಗಳನ್ನು ಕೆಡಗಣಿಸಲಾಗಿದೆ’ ಎಂದು ಸುರೇಶ ಸಿದ್ದಿ ಅವರು ಆಕ್ಷೇಪವ್ಯಕ್ತಪಡಿಸಿದ್ದಾರೆ. `ಸಿದ್ದಿ ಸಮುದಾಯದ ಹಿರಿಯರಿಗೂ ಸಂಘಟಕರು ಆಮಂತ್ರಣ ನೀಡಿಲ್ಲ. ಅದು ಸಮುದಾಯಕ್ಕೆ ಮಾಡಿದ ಅಪಮಾನ’ ಎಂದವರು ಅಸಮಧಾನಹೊರ ಹಾಕಿದ್ದಾರೆ.
ADVERTISEMENT
`ಸಿದ್ದಿ ಸಮುದಾಯವೂ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಆದಿವಾಸಿ ಬುಡಕಟ್ಟು ಸಮಾಜವಾಗಿದೆ. ಹೀಗಿರುವಾಗ, ಸಿದ್ದಿ ಸಮುದಾಯದವರಿಗೆ ಈ ವಿಷಯದ ಬಗ್ಗೆ ಅರಿವು ಮೂಡಿಸದಿರುವುದು ಸರಿಯಲ್ಲ. ಕನಿಷ್ಟ ಸಮಾಜದ ಪ್ರಮುಖರಿಗೆ ಆಮಂತ್ರಣವನ್ನು ಸಹ ನೀಡದೇ ಕಾರ್ಯಕ್ರಮ ಆಯೋಜಿಸಿರುವುದು ಖಂಡನೀಯ’ ಎಂದು ಹೇಳಿದ್ದಾರೆ. `ವಿಶಿಷ್ಟ ಹಿನ್ನೆಲೆ ಹೊಂದಿರುವ ವನವಾಸಿ ಸಿದ್ದಿ ಸಮುದಾಯದಲ್ಲಿ ಅನೇಕ ಹಿರಿಯರಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮ್ಮೇಳನ ನಡೆಸಲು ಮುಂದಾಗಿರುವುದು ಸರಿಯಲ್ಲ’ ಎಂದಿದ್ದಾರೆ.
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
`ಈ ಸಮ್ಮೇಳನದಲ್ಲಿ ಸಿದ್ದಿ ಸಮುದಾಯದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದಾರೆ. ಯಾರನ್ನೋ ಮೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಿದ ಹಾಗಿದ್ದು, ಸಂಘಟಕರು ಅದಕ್ಕೆ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.