ವಿಭೂತಿ ಜಲಪಾತಕ್ಕೆ ಆಗಮಿಸಿದ್ದ ಗಜಪತಿ ಎಂಬಾತರು ಕಲ್ಬಂಡೆಯಿoದ ಕೆಳಗೆ 20 ಅಡಿ ಆಳಕ್ಕೆ ಬಿದ್ದಿದ್ದು, ಅಲ್ಲಿದ್ದ ವಿಜಯ ನಾಯಕ ಅವರು ಸಾಹಸ ಮಾಡಿ ಗಜಪತಿ ಅವರ ಪ್ರಾಣ ಉಳಿಸಿದ್ದಾರೆ. ಆಕಸ್ಮಿಕವಾಗಿ ಕಾಲು ಜಾರಿ ಕಂದಕಕ್ಕೆ ಬಿದ್ದರೂ ಗಜಪತಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚನೈನ ಗಜಪತಿ ಅವರು ಶುಕ್ರವಾರ ಅಂಕೋಲಾದ ವಿಭೂತಿ ಪಾಲ್ಸ್’ಗೆ ಆಗಮಿಸಿದ್ದರು. 9 ಜನರ ತಂಡದ ಜೊತೆ ಅವರು ಪ್ರಕೃತಿ ವೀಕ್ಷಣೆಗಾಗಿ ಬಂದಿದ್ದರು. ಆ ತಂಡದ ಸದಸ್ಯರೆಲ್ಲರೂ ವಿಭೂತಿ ಜಲಪಾತದ ಮೇಲ್ಬಾಗಕ್ಕೆ ಹೋಗಿ ವಿಹರಿಸುತ್ತಿದ್ದರು. ಅಲ್ಲಿಂದ ಕಲ್ಬಂಡೆ ಮೇಲೆ ಕುಳಿತ ಅವರೆಲ್ಲರೂ ಮೋಜು-ಮಸ್ತಿಯಲ್ಲಿ ನಿರತರಾಗಿದ್ದರು. ಆಗ, ಗಣಪತಿ ಅವರು ಒಮ್ಮೆಲೆ ಜಾರಿ ಕೆಳಗೆ ಬಿದ್ದರು. ಕ್ಷಣಮಾತ್ರದಲ್ಲಿಯೇ ಅವರು 20 ಅಡಿ ಆಳಕ್ಕೆ ಕುಸಿದು ಬಿದ್ದರು. ರಭಸವಾಗಿದ್ದ ನೀರಿನಲ್ಲಿ ಅವರು ಮುಂದೆ ಚಲಿಸಿದರು.
ಈಜು ಬಾರದೇ ಪರತಪಿಸುತ್ತಿದ್ದ ಗಜಪತಿ ಅವರಿಗೆ ಅವರ ಸ್ನೇಹಿತ ಅಶ್ವಥ್ ಅವರು ನೆರವಿಗೆ ಬಂದರು. ಆದರೆ, ಅಶ್ವಥ್ ಅವರು ನುರಿತ ಈಜುಪಟುವಾಗಿರಲಿಲ್ಲ. ಈ ವೇಳೆ ಅಲ್ಲಿ ವಿಜಯ ನಾಯಕ ಅವರು ಜೀವ ರಕ್ಷಕ ಸಿಬ್ಬಂದಿಯಾಗಿದ್ದರು. ನೀರಿನ ಗುಂಡಿಯಲ್ಲಿ ಮುಳುಗುತ್ತಿದ್ದ ಗಜಪತಿ ಅವರನ್ನು ನೋಡಿದ ಅವರು ತಕ್ಷಣ ಕಾರ್ಯಾಚರಣೆಗಿಳಿದರು. ತಕ್ಷಣ ರೆಸ್ಕ್ಯೂ ಟ್ಯೂಬ್ ಉಪಕರಣ ಬಳಸಿದ ವಿಜಯ ನಾಯಕ ಅವರು ಅದರ ಮೂಲಕ ಗಣಪತಿ ಅವರನ್ನು ಕಾಪಾಡಿದರು. ನೀರಿನಲ್ಲಿ ಮುಳುಗುತ್ತಿದ್ದ ಅವರನ್ನು ಮೇಲೆತ್ತಿ ಉಸಿರಾಟಕ್ಕೆ ಗಾಳಿ ಸಿಗುವ ಹಾಗೇ ಮಾಡಿದರು. ಕೆಲ ಸಮಯದ ನಂತರ ಗಜಪತಿ ಅವರು ಚೇತರಿಸಿಕೊಂಡಿದ್ದು, ಮರಳಿ ತಮ್ಮ ತಂಡ ಸೇರಿದರು.