ಕರಿಕಲ್ ಸೊಸಗಡಿಯ ಆನಂದ ಮೊಗೇರ್ ಅವರು ಬೆಂಗಳೂರಿನ ಮಹಿಳೆಯೊಬ್ಬರ ಬಳಿ 3.50 ಲಕ್ಷ ರೂ ಸಾಲ ಮಾಡಿದ್ದು, ಆ ಹಣವನ್ನು ಬೆಟ್ಟಿಂಗ್ ಆಫ್’ಗೆ ಸುರಿದಿದಿದ್ದಾರೆ. ಹಣ ಮರಳಿಸುವಂತೆ ಮಹಿಳೆ ಕೇಳಿಕೊಂಡಾಗ ಅವರ ಫೋನ್ ನಂ ಬ್ಲಾಕ್ ಮಾಡಿದ್ದಾರೆ!
ಬೆಂಗಳೂರಿನ ಯಲಹಂಕ ಬಳಿ ಮಾನಸಾ ಚಂದ್ರಶೇಖರ್ ಅವರು ವಾಸವಾಗಿದ್ದಾರೆ. 35 ವರ್ಷದ ಅವರು ಇಂಟಿರಿಯಲ್ ಡಿಸೈನರ್ ಆಗಿ ಬದುಕು ಕಟ್ಟಿಕೊಂಡಿದ್ದಾರೆ. ಮಾನಸ ಅವರಿಗೆ ಪತಿಯ ಸ್ನೇಹಿತರೊಬ್ಬರಿಂದ ಭಟ್ಕಳದ ಕರಿಕಲ್ ಸೂಸಗಡಿಯ ಆನಂದ ಮಾದೇವ ಮೊಗೇರ ಅವರ ಪರಿಚಯವಾಗಿದೆ. ಆನಂದ ಮೊಗೇರ್ ಅವರು ತಮಗೂ ಇಂಟಿರಿಯಲ್ ಡಿಸೈನ್ ಮಾಡಿಸಬೇಕು ಎಂದಿದ್ದು, ಅದಕ್ಕೆ ಮಾನಸ ಅವರು 7.50 ಲಕ್ಷ ರೂ ಎಸ್ಟಿಮೇಟ್ ಸಿದ್ಧಪಡಿಸಿ ಕೊಟ್ಟಿದ್ದಾರೆ. ಆಗ, ಆನಂದ ಮೊಗೇರ್ ಅವರು ಮಾನಸ ಅವರಿಗೆ 6 ಲಕ್ಷ ರೂ ಹಣವನ್ನು ಪಾವತಿ ಮಾಡಿದ್ದಾರೆ.
1.5 ಲಕ್ಷ ರೂ ಬಾಕಿ ಹಣವನ್ನು ಆನಂದ ಮೊಗೇರ್ ಅವರು ಕೊಡಬೇಕಿದ್ದು, ಈ ನಡುವೆ ಅವರಿಗೆ ಆರ್ಥಿಕ ಸಮಸ್ಯೆಯಾಗಿದೆ. `ತನ್ನ ಖಾತೆ ಪ್ರೀಜ್ ಆಗಿದೆ’ ಎಂದು ಹೇಳಿದ ಆನಂದ ಮೊಗೇರ್ ಅವರು ಮೀನುಗಾರಿಕೆ ವ್ಯವಹಾರ ಮಾಡಲು ಸಮಸ್ಯೆಯಾಗಿರುವ ಬಗ್ಗೆ ವಿವರಿಸಿದ್ದಾರೆ. ಮಾನಸ ಅವರಿಂದ 3.5 ಲಕ್ಷ ರೂ ಸಾಲಪಡೆದಿದ್ದಾರೆ. ನಂತರ ಮಾನಸ ಅವರ ಮನವೊಲೈಸಿ ತಮ್ಮ ವ್ಯವಹಾರಕ್ಕಾಗಿ ಅವರ ಬ್ಯಾಂಕ್ ಖಾತೆಯನ್ನು ಬಳಸಿಕೊಂಡಿದ್ದಾರೆ. ಈ ವೇಳೆ ಆನಂದ ಮೊಗೇರ್ ಅವರು ಮಾನಸ ಅವರ ಬ್ಯಾಂಕ್ ಖಾತೆಗೆ ತಮ್ಮ ಮೊಬೈಲ್ ನಂ ಬಳಸಿ ಫೋನ್ ಫೇ ಮಾಡಿಕೊಂಡಿದ್ದಾರೆ.
ಮಾನಸ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಅವರು ಜೂಜಾಟಕ್ಕೆ ಬಳಸಿದ್ದಾರೆ. ಪಾರ್ಕರ್ 777 ಎಂಬ ಬೆಟ್ಟಿಂಗ್ ಆಫ್’ಗೆ ಹಣ ಪಾವತಿ ಆಗುತ್ತಿರುವ ಬಗ್ಗೆ ಮಾನಸ ಅವರಿಗೆ ಬ್ಯಾಂಕಿನವರಿoದ ಮಾಹಿತಿ ಬಂದಿದೆ. ಈ ಬಗ್ಗೆ ಅವರು ಆನಂದ ಮೊಗೇರ್ ಅವರನ್ನು ಪ್ರಶ್ನಿಸಿದ್ದು, ಆಗ ಆನಂದ ಮೊಗೇರ್ ಅವರು ಸರಿಯಾಗಿ ಉತ್ತರಿಸಿಲ್ಲ. `ತಮ್ಮ ಹಣ ಮರಳಿಸಿ’ ಎಂದು ಹೇಳಿದಾಗ ಮಾನಸ ಅವರ ಮೊಬೈಲ್ ನಂ ಬ್ಲಾಕ್ ಮಾಡಿದ್ದಾರೆ. ಈ ಕುರಿತು ಪ್ರಶ್ನಿಸಲು ಮಾನಸ ಅವರು ಆನಂದ ಮೊಗೇರ್ ಅವರ ಮನೆಗೆ ಹೋದಾಗ ಅವರ ಮೊಬೈಲ್ ಸಹ ಕಾಣೆಯಾಗಿದೆ.
ತಮ್ಮ ಬ್ಯಾಂಕ್ ಖಾತೆಯನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಮಾನಸ ಅವರು ಬೆಂಗಳೂರಿನಲ್ಲಿ ಆನಂದ ಮೊಗೇರ್ ಅವರ ವಿರುದ್ಧ ದೂರು ನೀಡಿದ್ದಾರೆ. ಆನಂದ ಮೊಗೇರ್ ಅವರು ಭಟ್ಕಳದಲ್ಲಿ ಮಾನಸ ಅವರ ವಿರುದ್ಧ ಚೆಕ್ ಬೌನ್ಸ್ ಕೇಸು ಹಾಕಿದ್ದಾರೆ. ಮಾನಸ ಅವರು ವಿಚಾರಣೆಗಾಗಿ ಕೋರ್ಟಿಗೆ ಬಂದಾಗ ಸೊಸಗಡಿಯ ಈಶ್ವರ ಸಣ್ತಮ್ಮ ನಾಯ್ಕ ಅವರ ಜೊತೆ ಆನಂದ ಮೊಗೇರ್ ಅವರು ಆಗಮಿಸಿ ಬೆದರಿಕೆ ಹಾಕಿದ್ದಾರೆ.