ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ದೀಪಾವಳಿ ಹಬ್ಬದ ಅವಧಿಯಲ್ಲಿಯೇ ಬೆಳೆ ವಿಮೆ ಪರಿಹಾರ ಸಿಕ್ಕಿದೆ. ಈಗಾಗಲೇ 4 ಕೋಟಿ ರೂ ರೈತರ ಖಾತೆಗೆ ಜಮಾ ಆಗಿದ್ದು, ಒಟ್ಟು 62 ಕೋಟಿ ರೂ ಜಮಾ ಆಗುವ ನಿರೀಕ್ಷೆಯಿದೆ.
ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ ರೈತರಿದ್ದಾರೆ. ಸ್ಥಳೀಯ ಸೊಸೈಟಿಗಳ ಮೂಲಕ ಅವರು ಬೆಳೆ ಸಾಲಪಡೆದಿದ್ದು, ಆ ವೇಳೆಯಲ್ಲಿಯೇ ಬೆಳೆ ವಿಮೆ ಮಾಡಿಸಿದ್ದಾರೆ. ಅನೇಕ ಕಡೆ ಬೆಳೆ ವಿಮೆ ಕಂತು ಕಡಿತವಾದ ನಂತರವೇ ಬೆಳೆ ಸಾಲ ರೈತರ ಖಾತೆಗೆ ಜಮಾ ಆಗುತ್ತಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಹವಾಮಾನ ಆಧಾರಿತ ಬೆಳೆ ವಿಮಾ ಪದ್ಧತಿ ಜಾರಿಯಲ್ಲಿದ್ದು, ಶುಕ್ರವಾರ ಸಂಜೆಯಿಂದಲೇ ವಿಮೆ ಪರಿಹಾರ ರೈತರ ಖಾತೆಗೆ ಜಮಾ ಆಗುತ್ತಿದೆ.
ಬೆಳೆ ವಿಮೆ ನೀಡುವ ವಿಷಯದಲ್ಲಿ ಕಳೆದ ರ್ಷ ಸಾಕಷ್ಟು ಗೊಂದಲ ಉಂಟಾಗಿತ್ತು. ಮಳೆ ಯಂತ್ರ ಹಾಳಾಗಿರುವುದು ಹಾಗೂ ಅದರ ನರ್ವಹಣೆ ಸರಿಯಾಗಿರುವುದು ದೊಡ್ಡ ಸಮಸ್ಯೆಯಾಗಿತ್ತು. ಬೆಳೆ ವಿಮೆ ಪರಿಹಾರ ವಿಳಂಬವಾಗಿರುವುದು ರಾಜಕೀಯ ಕೆಸರಾಟಕ್ಕೂ ಕಾರಣವಾಗಿತ್ತು. ಈ ಬಾರಿಯೂ ಹೋರಾಟದ ನಂತರವೇ ಬೆಳೆ ವಿಮೆ ಬರುವ ಬಗ್ಗೆ ರೈತರು ಮಾತನಾಡುತ್ತಿದ್ದು, ಒಂದುವರೆ ತಿಂಗಳು ತಡವಾದರೂ ಈ ಬಾರಿ ರೈತರ ಖಾತೆಗೆ ಹಣ ಜಮಾ ಆಗುತ್ತಿದೆ.
2025-26ನೇ ಬೆಳೆ ವಿಮಾ ಬಾರದ ಬಗ್ಗೆ ಮುಂಡಗೋಡಿನಲ್ಲಿ ರೈತರು ನಿನ್ನೆ ಪ್ರತಿಭಟನೆ ಮಾಡಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ವಿಮಾ ಮೊತ್ತ ಜಮಾ ಆಗುತ್ತಿದೆ. ಆಯಾ ರೈತರು ಹೊಂದಿದ ಕ್ಷೇತ್ರಕ್ಕೆ ಅನುಸಾರವಾಗಿ ಬೆಳೆ ವಿಮೆ ಪರಿಹಾರ ಜಮಾ ಆಗುತ್ತಿದೆ. ಗ್ರಾಮ ಪಂಚಾಯತದಿಂದ ಗ್ರಾಮ ಪಂಚಾಯತಗೆ ವಿಮಾ ಪರಿಹಾರ ಮೊತ್ತ ಬದಲಾಗಿದೆ.