ಹಳಿಯಾಳದ ಅನೇಕರಿಗೆ ಗಾಂಜಾ ಕೊಟ್ಟು ಅವರ ಮನೆ-ಕುಟುಂಬ ಹಾಳು ಮಾಡುತ್ತಿದ್ದ ಸುದೀಪ ಬೋವಿವಡ್ಡರ್ ಅವರನ್ನು ಪೊಲೀಸರು ಹಿಡಿದಿದ್ದಾರೆ. ಯುವ ಸಮುದಾಯದವರನ್ನು ಅಡ್ಡದಾರಿಗೆ ಎಳೆಯುತಿದ್ದ ಸುದೀಪ ಬೊವಿವಡ್ಡರ್ ಅವರನ್ನು ಜೈಲಿಗೆ ಕಳುಹಿಸಿದ್ದಾರೆ.
ಹಳಿಯಾಳದ ಸಿದ್ದರಾಮೇಶ್ವರಗಲ್ಲಿಯ ಸ್ಲಂ ಎರಿಯಾದಲ್ಲಿ ಪಿ ಸುದೀಪ್ ದಶರಥ ಬೋವಿವಡ್ಡರ ಅವರು ಸದ್ಯ ಜಿ+2 ಕಟ್ಟಡದಲ್ಲಿ ವಾಸವಾಗಿದ್ದರು. ದೇಶಪಾಂಡೆ ನಗರದ ಇಂಡಸ್ಟ್ರಿಯಲ್ ಏರಿಯಾದ ಪ್ರೆಸ್ಟೀಜ್ ಬುಕ್ ಹೌಸ್ ಮುಂಭಾಗ ಅವರು ಗಾಂಜಾ ಮಾರಾಟ ನಡೆಸಿದ್ದರು. ಈ ಬಗ್ಗೆ ಮಾಹಿತಿ ಅರಿತ ಪಿಸೈ ಕಿರಣ ಪಾಟೀಲ್ ಮತ್ತು ಕುಮಾರ ಕಾಂಬಳೆ ಸೇರಿ ಅಲ್ಲಿ ದಾಳಿ ಮಾಡಿದರು. ಆಗ, ಅವರಿಗೆ 130 ಗ್ರಾಂ ತೂಕದ ಒಣಗಿದ ಗಾಂಜಾ ಸಿಕ್ಕಿತು. ಈ ಬಗ್ಗೆ ಅವರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ದಾಂಡೇಲಿ ಪೊಲೀಸ್ ಉಪಾಧೀಕ್ಷಕ ಗಿರೀಶ್ ಬಿ ಹಾಗೂ ಹಳಿಯಾಳ ಪೊಲೀಸ್ ವೃತ್ತ ನಿರೀಕ್ಷಕ ಭೀಮಣ್ಣ ಸೂರಿ ಅವರಿಗೆ ಮಾಹಿತಿ ನೀಡಿದರು.
ಪಿಸೈ ಕಿರಣ ಪಾಟೀಲ್ ಮತ್ತು ಕುಮಾರ ಕಾಂಬಳೆ ಅವರ ಜೊತೆ ಪೊಲೀಸ್ ಸಿಬ್ಬಂದಿ ಶ್ರೀಶೈಲ್ ಜಿ ಎಮ್, ಲಕ್ಷ್ಮಣ ಪೂಜಾರಿ, ಗುರಪ್ಪ ವಡ್ಡರ, ಗಣೇಶ, ವಿನಾಯಕ್, ಮಲ್ಲಿಕಾರ್ಜುನ್ ಹಾಗೂ ದೇವಣ್ಣ ಕೋಳಂಬಿ ಅವರು ಕಾರ್ಯಾಚರಣೆಯಲ್ಲಿದ್ದರು.