ಸಿದ್ದಾಪುರದ ಕಾನಸೂರಿನ ಇಂದಿರಾಗಾoಧಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜೊತೆ ಶಿಕ್ಷಕ ಅಬ್ಬು ತಲಹ್ ಅವರು ಅನುಚಿತವಾಗಿ ವರ್ತಿಸಿದ್ದು, ಅದನ್ನು ನೋಡಿದ ತಪ್ಪಿಗೆ ಅದೇ ಹಾಸ್ಟೇಲಿನ ಗೋಕುಲ ಗೌಡ ಅವರು ಸಾವನಪ್ಪಿದ್ದಾರೆ. ಈ ಪ್ರಕರಣದ ಮುಖ್ಯ ಆರೋಪಿ ಅಬ್ಬು ತಲಹ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾನಸೂರಿನ ಇಂದಿರಾಗಾAಧಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ (15) ಅವರ ಸಾವು ಮೊದಲು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಗೋಕುಲ ಗೌಡ ಅವರ ಸಾವಿನ ವೇಳೆ ವಿದ್ಯುತ್ ಕಡಿತ, ವಸತಿ ನಿಲಯದ ಪ್ರಭಾರಿ ವಾರ್ಡನ್ ಸಹ ಆಗಿರುವ ಅಬ್ಬು ತಲಹ ಹಿಂದೆ ನಡೆಸಿದ ಕ್ರೌರ್ಯ ಬೆಳಕಿಗೆ ಬಂದ ನಂತರ ಆ ಸಾವಿನ ತನಿಖೆ ಇನ್ನೊಂದು ದಿಕ್ಕಿನ ಕಡೆ ಸಾಗಿತು. ಶಿಕ್ಷಕನ ಕಾಮದ ಮುಖದ ಬಗ್ಗೆ ಸಾವಿಗೂ ಮುನ್ನ ಗೋಕುಲ ಗೌಡ ಅವರು ತಾಯಿ ಬಳಿ ಹೇಳಿದ್ದರು. ಜೊತೆಗೆ ಅಬ್ಬು ತಲಾಹ್ ತಮ್ಮ ಮೇಲೆ ನಡೆಸಿದ ಹಲ್ಲೆಯ ಬಗ್ಗೆಯೂ ವಿವರಿಸಿದ್ದರು. ಗೋಕುಲ ಗೌಡ ಅವರ ಸಾವಿನ ನಂತರ ಈ ಎಲ್ಲಾ ವಿಷಯವನ್ನು ಅವರ ತಾಯಿ ಪೊಲೀಸರಲ್ಲಿ ಹೇಳಿಕೊಂಡಿದ್ದು, ಅದೇ ತನಿಖೆಗೆ ಮಹತ್ವದ ತಿರುವು ಕೊಟ್ಟಿದೆ.
ಈ ಎಲ್ಲಾ ಹಿನ್ನಲೆ ಶನಿವಾರ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ನ್ಯಾಯಾಲಯ ಅಬ್ಬು ತಲಹ್ ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣದ ಸಮಗ್ರ ತನಿಖೆಗಾಗಿ ಸಿದ್ದಾಪುರದ ಜನ ಪ್ರತಿಭಟಿಸಿದ್ದು, ಅದರ ಪರಿಣಾಮವಾಗಿ ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪಪಡೆದಿದೆ. ಪೊಲೀಸರು ಈ ಸಾವಿನ ಹಿಂದಿರುವ ಸತ್ಯ ಅರಿಯುವುದಕ್ಕಾಗಿ ಸಾಕಷ್ಟು ಕಸರತ್ತು ನಡೆಸಿದ್ದಾರೆ.