ಮತದಾರರ ಪರಿಷ್ಕರಣೆ ಜಾಗೃತಿ ಅಂಗವಾಗಿ ಸರ್ಕಾರ ಎಲ್ಲಡೆ ವಿವಿಧ ಕಾರ್ಯಕ್ರಮ ರೂಪಿಸಿದ್ದು, ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿಯೂ ಜಾಥಾ ನಡೆಸಲಾಗಿದೆ.
ತಹಶೀಲ್ದಾರ್ ಕಚೇರಿ, ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಹಾಗೂ ಹೋಲಿ ರೋಜರಿ ಪ್ರೌಢಶಾಲೆ ಸಹಯೋಗದಲ್ಲಿ ಈ ಜಾಥಾ ನಡೆದಿದೆ. ಇ ಎಲ್ ಸಿ ಕ್ಲಬ್ ಅಡಿ ನಡೆದ ಜಾಥಾಗೆ ಕ್ಷೇತ್ರ ಸಮನ್ವಯ ಅಧಿಕಾರಿ ಸಂತೋಷ ಜಿಗಳೂರು ಅವರು ಚಾಲನೆ ನೀಡಿದ್ದಾರೆ. ಮತದಾರರ ಪರಿಷ್ಕರಣೆಯ ಜಾಗೃತಿ ವಿಷಯಗಳ ಬಗ್ಗೆ ಅವರು ಈ ವೇಳೆ ಮಾತನಾಡಿದ್ದಾರೆ.ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿ ಚಂದ್ರಹಾಸ ನಾಯ್ಕ, ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ ರಾಜಶೇಖರ್ ಅವರು ಈ ಜಾಥಾದ ಪ್ರಮುಖ ಜವಾಬ್ದಾರಿ ನಿಭಾಯಿಸಿದ್ದಾರೆ.
ಯಲ್ಲಾಪುರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿದ್ದು, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದೆ. ಹಿರಿಯ ಶಿಕ್ಷಕರಾದ ವೆಂಕಟ್ರಮಣ ಭಟ್, ಕನ್ನಡ ಶಿಕ್ಷಕ ಮಲ್ಲಿಕಾರ್ಜುನ್ ಹೆಗ್ಗೇರಿ, ನಿವೃತ್ತ ಶಿಕ್ಷಕ ಚಂದ್ರಶೇಖರ್ ಹಾಗೂ ಹೋಲಿ ರೋಜರಿ ಪ್ರೌಢಶಾಲೆಯ ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದಾರೆ. ಇ ಎಲ್ ಸಿ ಕ್ಲಬ್ ಸಂಚಾಲಕ ನೆಲ್ಸನ್ ಗೊನ್ಸಾಲ್ವಿಸ್ ಅವರು ಈ ಎಲ್ಲಾ ಕಾರ್ಯಕ್ರಮ ಉಸ್ತುವಾರಿ ನೋಡಿಕೊಂಡಿದ್ದಾರೆ.