ಗೋಕರ್ಣದ ಈಶಾ ವ್ಯಾಲಿ ರೆಸಾರ್ಟಿನ ಜಗದೀಶ ನಾಯಕ ಅವರು ಗೋವಾದ ಭಾನು ಪಾವ ಎಂಬಾತರಿಗೆ ವೆಬ್‌ಸೈಟ್ ರಚನೆ ಹಾಗೂ ಲೊಕೇಶನ್ ಅಪ್ಟೇಡ್ ಕೆಲಸ ನೀಡಿ ಮೋಸ ಹೋಗಿದ್ದಾರೆ. ಕೆಲಸ ಮಾಡದಿದ್ದರೂ 8 ಲಕ್ಷ ರೂ ಕೊಡಬೇಕು ಎಂದು ಭಾನು ಬಾವ ಅವರು ಪಟ್ಟು ಹಿಡಿದಿದ್ದು, ಆ ಹಣ ಕೊಡದ ಕಾರಣ ಜಗದೀಶ ನಾಯಕ ಅವರ ವಿರುದ್ಧ ಅವರು ಜಾಲತಾಣದಲ್ಲಿ ಕೆಟ್ಟದಾಗಿ ಬರೆದಿದ್ದಾರೆ.
ಗೋವಾದ ಆಶಿವೆಂ ಬಳಿಯಿ ಇಂಡಿಯಾ ಟ್ರಾವೆಲ್ಸ್ & ಟೂರಿಸಂ ಎಂಬ ಕಂಪನಿಯಿದ್ದು, ಅಲ್ಲಿ ಭಾನು ಪಾವ ಎಂಬಾತರು ವ್ಯವಸ್ಥಾಪಕರಾಗಿದ್ದಾರೆ. ಗೋಕರ್ಣದ ಈಶಾ ವ್ಯಾಲಿ ರೆಸಾರ್ಟಿನ ಜಗದೀಶ ದೇವರಾಯ ನಾಯಕ ಅವರು ಭಾನು ಪಾವ ಅವರನ್ನು ಸಂಪರ್ಕಿಸಿದ್ದು, 8 ಲಕ್ಷ ರೂಪಾಯಿಯ ಮಾತುಕಥೆ ಮಾಡಿದ್ದಾರೆ. ಅವರ ರೆಸಾರ್ಟ ವ್ಯವಹಾರಕ್ಕೆ ಅನುಕೂಲವಾಗುವ ಹಾಗೇ ವೆಬ್‌ಸೈಟ್ ಹಾಗೂ ಲೊಕೇಶನ್ ಅಪ್ಟೇಡ್ ಮಾಡಿಸುವುದಕ್ಕಾಗಿ ಭಾನು ಬಾವ ಅವರು ನಂಬಿಸಿದ್ದಾರೆ. ಆದರೆ, ಭಾನು ಪಾವ ಅವರು ಮಾತುಕಥೆ ಪ್ರಕಾರ ನಡೆದುಕೊಂಡಿಲ್ಲ. ಹೀಗಾಗಿ ಜಗದೀಶ ನಾಯಕ ಅವರು ದುಡ್ಡು ಕೊಟ್ಟಿಲ್ಲ.
ಹೀಗಿರುವಾಗ ಭಾನು ಪಾವ ಅವರು ಪದೇ ಪದೇ ದುಡ್ಡಿಗಾಗಿ ಕಾಟ ಕೊಟ್ಟಿದ್ದಾರೆ. `ಕೆಲಸ ಮಾಡದೇ ಹಣ ಕೊಡುವುದಿಲ್ಲ’ ಎಂದು ಜಗದೀಶ ನಾಯಕ ಅವರು ಹೇಳಿದ್ದಾರೆ. ಇದರಿಂದ ಭಾನುಪಾವ ಅವರು ಸಿಟ್ಟಾಗಿದ್ದು, ಜಗದೀಶ ನಾಯಕ ಅವರ ವಿರುದ್ಧ ಕೆಟ್ಟದಾಗಿ ಬರೆಯುವುದಾಗಿ ಬೆದರಿಸಿದ್ದಾರೆ. ಅದಾಗಿಯೂ, ಹಣ ಕೊಡದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಜಗದೀಶ ನಾಂiÀiಕ ಹಾಗೂ ಅವರ ಪತ್ನಿ ಫೋಟೋ ಹರಿಬಿಟ್ಟು ನಿಂದನೆ ಮಾಡಿದ್ದಾರೆ. ಅದರಿಂದ ಅವಮಾನ ಅನುಭವಿಸಿದ ಜಗದೀಶ ನಾಯಕ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.