ಹೊನ್ನಾವರ ಹಳದಿಪುರದದಲ್ಲಿ ವೈಶ್ಯ ಸಮಾಜದ ಕೃಷ್ಣಾಪುರ ಮಠವಿದ್ದು, ಅಲ್ಲಿನ ವಾಮನಾಶ್ರಮ ಸ್ವಾಮೀಜಿ ವಿರುದ್ಧ ಅಕ್ರಮ-ಅನೈತಿಕ ಹಾಗೂ ಅವ್ಯವಹಾರಗಳ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನಿಸಿದ ಕಾರವಾರದ ಅಜಿತ್ ಪೊಕಳೆ ಅವರಿಗೆ ಒದೆ ಬಿದ್ದಿದೆ. ಅಪರಿಚಿತರು ದಾಳಿ ಮಾಡಿದ ವಿಷಯವನ್ನು ಅವರು ಪೊಲೀಸರ ಬಳಿ ಹೇಳಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹೊನ್ನಾವರ ಹಳದಿಪುರದ ಕೃಷ್ಣಾಶ್ರಮದ ವಾಮನಾಶ್ರಮ ಸ್ವಾಮೀಜಿ ಅವರ ವಿರುದ್ಧ ಮಹಿಳೆಯರಿಗೆ ಕಿರುಕುಳ ಹಾಗೂ ಹಣಕಾಸು ಅವ್ಯವಹಾರ ಮಾಡಿದ ಆರೋಪಗಳಿವೆ. ಹೀಗಾಗಿ ಕಳೆದ ಐದು ತಿಂಗಳಿನಿAದ ವಾಮನಾಶ್ರಮ ಸ್ವಾಮೀಜಿ ಮಠ ಬಿಟ್ಟು ಬೇರೆಡೆ ಹೋಗಿದ್ದಾರೆ. ಈ ಬಗ್ಗೆ ಚರ್ಚಿಸುವುದಕ್ಕಾಗಿ ಜುಲೈ 5ರಂದು ವೈಶ್ಯ ಸಮಾಜದ ಕೃಷ್ಣಾಶ್ರಮದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸ್ವಾಮೀಜಿಯನ್ನು ಮತ್ತೆ ಮಠಕ್ಕೆ ಕರೆಯಿಸುವ ಬಗ್ಗೆ ಮಿಥುನ್ ಚಕ್ರವರ್ತಿ ಸೂಲೆಬೆಲೆ ಅವರು ಭಾಷಣ ಮಾಡಿದ್ದಾರೆ. ಈ ಸಭೆಗೆ ಕಾರವಾರ ಸದಾಶಿವಗಡದ ಅಜಿತ್ ಪೊಕಳೆ ಅವರು ಹೋಗಿದ್ದು, ಸ್ವಾಮೀಜಿಯವರ ನಡೆಯನ್ನು ಪ್ರಶ್ನಿಸಿದ್ದಾರೆ. ಐದು ತಿಂಗಳಿನಿoದ ಸ್ವಾಮೀಜಿ ಊರು ಬಿಟ್ಟಿರುವ ಬಗ್ಗೆ ಮಾತನಾಡಿದ್ದಾರೆ.
ಅಜಿತ್ ಪೊಕಳೆ ಅವರು ಮಾತನಾಡಿ ಹೊರಗೆ ಬರುವಾಗ 10 ಜನ ಅವರ ಮೇಲೆ ದಾಳಿ ಮಾಡಿದ್ದು, ಆ ವಿಡಿಯೋ ವೈರಲ್ ಆಗಿದೆ. ಅದಾದ ನಂತರ `ಮಠದ ವಾಮನಾಶ್ರಮ ಸ್ವಾಮೀಜಿ ವಿರುದ್ಧ ಮಠದ ಆಸ್ತಿ ಹಾಗೂ ಹಣಕಾಸು ವ್ಯವಹಾರಗಳಲ್ಲಿ ಅವ್ಯವಹಾರ ನಡೆಸಿದ್ದು, ಮಹಿಳೆಯರ ಮೇಲಿನ ಕಿರುಕುಳದ ಆರೋಪ ಎದುರಿಸುತ್ತಿದ್ದಾರೆ. ಸ್ವಾಮೀಜಿಯವರ ವಿರುದ್ಧ ಇಷ್ಟೊಂದು ಗಂಭೀರ ಆರೋಪಗಳು ಕೇಳಿಬಂದಿದ್ದರೂ ಈವರೆಗೆ ಪೊಲೀಸ್ ಠಾಣೆಯಲ್ಲಿ ಏಕೆ ದೂರು ದಾಖಲಾಗಿಲ್ಲ? ಎಂದು ಪ್ರಶ್ನಿಸಿದ ಕಾರಣ ಹಲ್ಲೆ ನಡೆದಿದೆ’ ಎಂದು ಅಜಿತ ಪೊಕಳೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. `ಅಪರಿಚಿತರು ತಮ್ಮ ಮೇಲೆ ಏಕಾಏಕಿ ಹಲ್ಲೆ ನಡೆಸಿದರು. ಕುತ್ತಿಗೆಯನ್ನು ಹಿಸುಕಿದರು, ಗಡ್ಡ ಮತ್ತು ತಲೆ ಕೂದಲು ಎಳೆದು ನೆಲಕ್ಕುರುಳಿಸಿ ಕಾಲಿನಿಂದ ಒದ್ದರು. ಅಲ್ಲದೆ, ಸ್ವಾಮೀಜಿಯವರ ವಿರುದ್ಧ ಮಾತನಾಡಿದರೆ ಜೀವ ಸಮೇತ ಮುಗಿಸಿ ಬಿಡುತ್ತೇವೆ’ ಎಂದು ಬೆದರಿಸಿದ ಬಗ್ಗೆ ಅವರು ದೂರಿದ್ದಾರೆ.
ಇದೇ ವಿಷಯವನ್ನು ಅವರು ಪೊಲೀಸರ ಬಳಿ ಹೇಳಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. `ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಟ್ರಸ್ಟ್ನವರು ಮೌನವಹಿಸಿರುವುದು ಅನುಮಾನಕ್ಕೆ ಮತ್ತಷ್ಟು ಕಾರಣ’ ಎಂದು ಅಜಿತ ಪೊಕಳೆ ಅವರು ಹೇಳಿದ್ದಾರೆ. `2008-09ರಲ್ಲಿ ಪಟ್ಟಾಭಿಷೇಕಗೊಂಡ ಸ್ವಾಮೀಜಿಯವರ ವಿರುದ್ಧ ಸಮಾಜದ ಆಸ್ತಿ, ಅಂಗಡಿ ಹಾಗೂ ಹಣಕಾಸು ನಿರ್ವಹಣೆಗೆ ಸಂಬAಧಿಸಿದ ಹಲವು ಪ್ರಶ್ನೆಗಳು ಉದ್ಭವಿಸಿರುವುದರಿಂದ ಈ ಕುರಿತು ಸಮಗ್ರ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ.