ತಂದೆ-ತಾಯಿ ಸಾವಿನಿಂದ ನೊಂದಿದ್ದ ನೆಜ್ಜೂರಿನ ಚಂದ್ರಶೇಖರ ವಕ್ಕಲಿಗ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ.
ಸಿದ್ದಾಪುರದ ನೆಜ್ಜೂರು ಹಾರೆಕೊಪ್ಪದಲ್ಲಿ ಚಂದ್ರಶೇಖರ ಅಣ್ಣಪ್ಪ ವಕ್ಕಲಿಗ ಅವರು ವಾಸವಾಗಿದ್ದರು. 30 ವರ್ಷದ ಅವರು ತಂದೆ-ತಾಯಿಯನ್ನು ಕಳೆದುಕೊಂಡಿದ್ದರು. ಅದಾದ ನಂತರ ಒಂಟಿ ಜೀವನ ನಡೆಸುತ್ತಿದ್ದ ಚಂದ್ರಶೇಖರ ಅವರು ಸರಾಯಿ ಚಟವನ್ನು ಅಂಟಿಸಿಕೊAಡಿದ್ದರು. ವಿಪರೀತ ಪ್ರಮಾಣದಲ್ಲಿ ವ್ಯಸನಕ್ಕೆ ಒಳಗಾದ ಅವರು ಒಂಟಿ ಜೀವನ ಬಾಳಲಾಗದೇ ಸಾವಿನ ನಿರ್ಧಾರ ಮಾಡಿದ್ದರು.
ಅದರಂತೆ, ಜುಲೈ 20ರಂದು ಸರಾಯಿ ಜೊತೆ ವಿಷ ಸೇರಿಸಿದ ಚಂದ್ರಶೇಖರ ಅವರು ಅದನ್ನು ಸೇವಿಸಿದರು. ಅಸ್ವಸ್ಥರಾಗಿ ಬಿದ್ದಿದ್ದ ಅವರನ್ನು ಚಿಕ್ಕಪ್ಪ ಬೊಮ್ಮಾ ಬೀರಾ ಗೊಂಡ ಅವರು ಗಮನಿಸಿ, ಆಸ್ಪತ್ರೆಗೆ ಸೇರಿಸಿದರು. ಮೊದಲು ಸಿದ್ದಾಪುರ ಸರ್ಕಾರಿ ಆಸ್ಪತ್ರೆ, ನಂತರ ಶಿರಸಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದರೂ ಅದರಿಂದ ಪ್ರಯೋಜನವಾಗಿಲ್ಲ. ವಿಷ ನೆತ್ತಿಗೇರಿದ ಪರಿಣಾಮ ಚಂದ್ರಶೇಖರ ವಕ್ಕಲಿಗ ಅವರು ಜುಲೈ 23ರಂದು ಸಾವನಪ್ಪಿದರು.