ಜೋರಾಗಿ ಬೈಕ್ ಓಡಿಸುವ ಶೆಟಗೇರಿಯ ವಿಘ್ನೇಶ ನಾಯಕ ಅವರು ತಮ್ಮ ಬೈಕನ್ನು ಪೂಜಗೇರಿಯ ಶಿಕ್ಷಕಿ ಶಿಲ್ಪಾ ಗಾಂವಕಾರ ಅವರಿಗೆ ಗುದ್ದಿದ್ದಾರೆ. ಗಂಭೀರ ಗಾಯಗೊಂಡ ಶಿಲ್ಪಾ ಗಾಂವಕಾರ್ ಅವರು ಸದ್ಯ ಮಂಗಳೂರು ಆಸ್ಪತ್ರೆ ಸೇರಿದ್ದಾರೆ.
ಅಂಕೋಲಾದ ಶೆಟಗೇರಿಯಲ್ಲಿ ವಿಘ್ನೇಶ ಗಣಪತಿ ನಾಯಕ ಅವರು ವಾಸವಾಗಿದ್ದಾರೆ. ಪೂಜಗೇರಿಯಲ್ಲಿ ಶಿಲ್ಪಾ ವಿನಾಯಕ ಗಾಂವಕಾರ ಅವರು ವಾಸವಾಗಿದ್ದಾರೆ. ಶಿಲ್ಪಾ ಗಾಂವಕಾರ ಅವರು ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿದ್ದಾರೆ. ಜುಲೈ 31ರ ಸಂಜೆ ವಿಘ್ನೇಶ ನಾಯಕ ಅವರು ಶಿಲ್ಪಾ ಗಾಂವಕಾರ ಅವರಿಗೆ ಬೈಕ್ ಗುದ್ದಿದ್ದಾರೆ. ಮಂಜಗುಣಿಯಿAದ ಅಂಕೋಲಾ ಕಡೆಗೆ ವೇಗವಾಗಿ ಹೊರಟಿದ್ದ ವಿಘ್ನೇಶ ನಾಯಕ ಅವರ ಬೈಕು ಪೂಜಗೇರಿ ಸೇತುವೆ ಬಳಿ ಶಿಲ್ಪಾ ಗಾಂವಕಾರ ಅವರಿಗೆ ಡಿಕ್ಕಿಯಾಗಿದೆ.
ಈ ವೇಳೆ ಶಿಲ್ಪಾ ಗಾಂವಕಾರ ಅವರು ನಡೆದು ಹೋಗುತ್ತಿದ್ದು, ರಸ್ತೆ ಅಂಚಿನಲ್ಲಿದ್ದ ಅವರಿಗೆ ವಿಘ್ನೇಶ ನಾಯಕ ಅವರು ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ಪರಿಣಾಂ ಶಿಲ್ಪಾ ಅವರ ತಲೆ, ಕೈ, ಕಾಲು ಸೇರಿ ದೇಹದ ವಿವಿಧ ಕಡೆ ಗಾಯಗಳಾಗಿವೆ. ಬೈಕಿನಲ್ಲಿದ್ದ ವಿಘ್ನೇಶ್ ಅವರಿಗೂ ಅಲ್ಲಲ್ಲಿ ಪೆಟ್ಟಾಗಿದೆ. ಶಿಲ್ಪಾ ಅವರನ್ನು ಅವರ ಅತ್ತೆ ಲಕ್ಷಿ ಕೋನು ಗಾಂವಕಾರ ಅವರು ಅಂಕೋಲಾ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಮುಂದೆ ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.