ಕಿರವತ್ತಿ ಬಳಿಯ ಹೊಸಳ್ಳಿಯ ಪ್ರಕಾಶ ಕಾಂಬಳೆ ಅವರು ಮಟ್ಕಾ ಬುಕ್ಕಿಯಾಗಿ ಕೆಲಸ ಮಾಡುತ್ತಿರುವುದು ಬಹಿರಂಗವಾಗಿದೆ. ಕಾಳಮ್ಮ ನಗರದ ಅಮೀರ ಶೇಖ್ ಅವರು ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದು, ಈ ವೇಳೆ ಮಟ್ಕಾ ಬುಕ್ಕಿಯ ಹೆಸರನ್ನು ಬಾಯ್ಬಿಟ್ಟಿದ್ದಾರೆ.
ಯಲ್ಲಾಪುರದಲ್ಲಿ ಆಗಾಗ ಮಟ್ಕಾ ಆಟಗಾರರ ಮೇಲೆ ದಾಳಿ ನಡೆದಿದ್ದರೂ, ಮಟ್ಕಾ ಬುಕ್ಕಿ ಹೆಸರು ಬಹಿರಂಗವಾಗಿರಲಿಲ್ಲ. ಹೀಗಾಗಿ ಮಟ್ಕಾ ಆಡಿಸುವವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುತ್ತಿದ್ದರು. ಮಟ್ಕಾ ಬುಕ್ಕಿಯಾದ ಪ್ರಕಾಶ ಕಾಂಬಳೆ ಅವರು ತೆರೆಮರೆಯಲ್ಲಿ ಕುಳಿತು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದು, ಮಟ್ಕಾ ಆಟದ ವಿಷಯವಾಗಿ ಇದೇ ಮೊದಲ ಬಾರಿ ಅವರ ಹೆಸರು ಪೊಲೀಸ್ ಕಡತದಲ್ಲಿ ದಾಖಲಾಗಿದೆ.
ಅಗಸ್ಟ 12ರಂದು ಕಾಳಮ್ಮ ನಗರದ ಅಮೀರ ಶೇಖ್ ಹಶಮ್ ಶೇಕ್ ಅವರು ಕಿರವತ್ತಿ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಅಲ್ಲಿ ಬಂದು ಹೋಗುವ ಸಾರ್ವಜನಿಕರನ್ನು ಮಾತನಾಡಿಸಿ ಜೂಜಾಟಕ್ಕೆ ಪ್ರೇರೇಪಿಸುತ್ತಿದ್ದರು. 1ರೂಪಾಯಿ ಹೂಡಿಕೆ ಮಾಡುವ ಅದೃಷ್ಟಗಾರರಿಗೆ 80ರೂಪಾಯಿಯಂತೆ ನೀಡುವುದಾಗಿ ಅವರು ಹೇಳುತ್ತಿದ್ದರು. ಜನರಿಂದ ಅಂಕಿ-ಸAಖ್ಯೆಗಳ ಮೇಲೆ ಹಣ ಕಟ್ಟಿಸಿಕೊಂಡು ಒಟ್ಟು 1430ರೂ ಸಂಗ್ರಹಿಸಿದ್ದರು.
ಪಿಸೈ ಮಹಾವೀರ ಕಾಂಬಳೆ ಅವರಿಗೆ ಈ ವಿಷಯ ಗೊತ್ತಾಯಿತು. ಅವರು ಅಲ್ಲಿ ದಾಳಿ ಮಾಡಿ ಅಮೀರ ಶೇಖ್ ಅವರನ್ನು ಹಿಡಿದರು. ಈ ವೇಳೆ ಮಟ್ಕಾ ಆಟಕ್ಕೆ ಬಳಸಿದ್ದ ಪೆನ್ನು,ಚೀಟಿ ಮೊದಲಾದ ಸಲಕರಣೆಗಳನ್ನು ಜಪ್ತು ಮಾಡಿದರು. ವಿಚಾರಣೆ ವೇಳೆ ಅಮೀರ ಶೇಖ್ ಅವರು ಪ್ರಕಾಶ ಕಾಂಬಳೆ ಅವರ ಹೆಸರು ಹೇಳಿದರು. ಮಟ್ಕಾ ಆಟದ ಚೀಟಿ ಹಾಗೂ ಹಣವನ್ನು ಪ್ರಕಾಶ ಕಾಂಬಳೆ ಅವರಿಗೆ ನೀಡುವುದಾಗಿ ಅಮೀರ ಶೇಖ್ ಅವರು ತಿಳಿಸಿದ್ದು, ಮಟ್ಕಾ ಆಡಿಸುವ ಅಮೀರ ಶೇಖ್ ಅವರ ಜೊತೆ ಮಟ್ಕಾ ಬುಕ್ಕಿಯಾದ ಪ್ರಕಾಶ ಕಾಂಬಳೆ ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದರು. ಕಾನೂನುಬಾಹಿರ ಕ್ರೀಡೆ ನಡೆಸದಂತೆಯೂ ಪೊಲೀಸರು ಎಚ್ಚರಿಕೆ ನೀಡಿದರು.
`ಜೂಜಾಟದಿಂದ ಜೀವನ ಹಾಳು’