ಅವರ್ಸಾ ಬಳಿಯ ಪ್ರೀತಿಂ ನಾಯ್ಕ ಅವರು ಪ್ರೀತಿಸಿದ ಹುಡುಗಿಗಾಗಿ ಫಿನೈಲ್ ಕುಡಿದಿದ್ದಾರೆ. ಪ್ರೀತಂ ನಾಯ್ಕ ಅವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆ ಹುಡುಗಿ ಪೊಲೀಸರ ಮೊರೆ ಹೊಗಿದ್ದಾರೆ.
ಅವರ್ಸಾದ ಸಕಲಬೇಣದಲ್ಲಿ ಪ್ರೀತಂ ಪ್ರಶಾಂತ ನಾಯ್ಕ ಅವರು ವಾಸವಾಗಿದ್ದಾರೆ. ಅವರು ಹಟ್ಟಿಕೇರಿ ಬಳಿಯ ಮಾವಿನಕೇರಿಯ ವಿದ್ಯಾರ್ಥಿನಿಯೊಬ್ಬರನ್ನು ಪ್ರೀತಿಸುತ್ತಿದ್ದು, ಪ್ರೀತಿಯ ನಿವೇದನೆ ಮಾಡಿದ್ದಾರೆ. ಆದರೆ, ಆ ಹುಡುಗಿ ಪ್ರೀತಂ ಅವರ ಪ್ರೀತಿಯನ್ನು ಮನ್ನಿಸಿಲ್ಲ. ಅದಾಗಿಯೂ, ಪ್ರೀತಂ ಅವರು ಹುಡುಗಿಗೆ ಪದೇ ಪದೇ ಫೋನ್-ಮೆಸೆಜ್ ಮಾಡುತ್ತಿದ್ದು, ಆ ಫೋನ್ ನಂ’ನ್ನು ಹುಡುಗಿ ಬ್ಲಾಕ್ ಮಾಡಿದ್ದಾರೆ.
ಅದಾಗಿಯ, ಕಳೆದ ಮೂರು ತಿಂಗಳಿನಿoದ ಪ್ರೀತಂ ನಾಯ್ಕ ಅವರು ಪದೇ ಪದೇ ಫೋನ್ ಮಾಡುತ್ತಿದ್ದಾರೆ. ಬೇರೆ ಬೇರೆ ಸಂಖ್ಯೆಯಿAದ ಫೋನ್ ಮಾಡುವುದನ್ನು ಅವರು ರೂಢಿಸಿಕೊಂಡಿದ್ದಾರೆ. ಅದರಂತೆ, ಜೂನ್ 22ರಂದು ಸಹ ಫೋನ್ ಮಾಡಿ, ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಾರೆ. ಪ್ರೀತಿಸದಿದ್ದರೆ ಹೊಡೆಯುವುದಾಗಿಯೂ ಬೆದರಿಸಿದ್ದಾರೆ. ಅದಾಗಿಯೂ, ಆ ಹುಡುಗಿ ಪ್ರೀತಿಯ ಕೋರಿಕೆಯನ್ನು ಮನ್ನಿಸಿಲ್ಲ.
ಅಗಸ್ಟ 6ರಂದು ಆ ಹುಡುಗಿ ಸ್ನೇಹಿತರ ಜೊತೆ ನಡೆದು ಹೋಗುವಾಗ ಪ್ರೀತಂ ನಾಯ್ಕ ಅವರು ಅಲ್ಲಿಗೆ ಆಗಮಿಸಿ ಬೈಕಿನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಹುಡುಗಿಯ ಮೊಬೈಲ್ ಕಸಿದು ಕೆನ್ನೆಗೆ ಬಾರಿಸಿದ್ದಾರೆ. ಅದಾದ ನಂತರ `ಪ್ರೀತಿಸದೇ ಇದ್ದರೆ ನಿನ್ನ ಹೆಸರು ಬರೆದು ಸಾಯುವೆ’ ಎಂದು ಬೆದರಿಸಿದ್ದಾರೆ. ಅದಾಗಿಯೂ, ಹುಡುಗಿ ಒಪ್ಪದ ಕಾರಣ ಪಿನೈಲ್ ಕುಡಿದಿದ್ದಾರೆ. ಮುನ್ನಚ್ಚರಿಕಾ ಕ್ರಮವಾಗಿ ಆ ಹುಡುಗಿ ಈ ಎಲ್ಲಾ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿ, ಪ್ರಕರಣ ದಾಖಲಿಸಿದ್ದಾರೆ.