ಉತ್ತರ ಕನ್ನಡ ಜಿಲ್ಲೆಯ 11 ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಮಾನಸಿಕ ಆರೋಗ್ಯ ಸಮಾಲೋಕರ ಹುದ್ದೆಗೆ ಅರ್ಹರ ಹುಡುಕಾಟ ನಡೆದಿದೆ.
ಈ ಹುದ್ದೆಗೆ ಆಯ್ಕೆ ಆದವರಿಗೆ 40 ಸಾವಿರ ರೂ ವೇತನ ಹಾಗೂ 10 ಸಾವಿರ ರೂ ಪ್ರಯಾಣ ಭತ್ಯೆ ಸೇರಿ ಮಾಸಿಕ 50 ಸಾವಿರ ರೂ ನೀಡಲಾಗುತ್ತದೆ. ಆರು ತಿಂಗಳ ಮಾತ್ರ ಕೆಲಸವಿರಲಿದ್ದು, ಈ ಸೇವೆ ತಾತ್ಕಾಲಿಕವಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯ 5 ಬ್ಲಾಕುಗಳಲ್ಲಿ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ 6 ಬ್ಲಾಕುಗಳಲ್ಲಿ ಕೆಲಸ ಮಾಡುವರಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸಿಲಿಂಗ್ ಮನೋವಿಜ್ಞಾನ ಅಥವಾ ಸಂಬAಧಿತ ವಿಷಯದಲ್ಲಿ ಎಂ ಎ ಅಥವಾ ಎಂ ಎಸ್ ಸಿ ಪದವಿಹೊಂದಿರಬೇಕು. ಶಾಲೆ ಅಥವಾ ಸಮುದಾಯದ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವವಿರಬೇಕು. ಕನ್ನಡ, ಇಂಗ್ಲೀಷ್ ಭಾಷೆ ಗೊತ್ತಿರಬೇಕು. ಮೂಲಭೂತ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 28ರಿಂದ 40 ವರ್ಷದೊಳಿಗನವರು ಮಾತ್ರ ಅರ್ಜಿ ಸಲ್ಲಿಸಬೇಕು.
ಉಪನಿರ್ದೇಶಕ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಕಾರವಾರ ಎಂಬ ಹೆಸರಿನಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ಹಾಗೂ ಉಪನಿರ್ದೇಶಕ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಶಿರಸಿ ಎಂಬ ಹೆಸರಿನ ಅಡಿ ಶಿರಸಿ, ಹಳಿಯಾಳ, ಮುಂಡಗೋಡ, ಸಿದ್ದಾಪುರ, ಯಲ್ಲಾಪುರ ಮತ್ತು ಜೋಯಿಡಾಗೆ ಅರ್ಜಿ ಸಲ್ಲಿಸಬೇಕು. ಅಗಸ್ಟ 21 ಅರ್ಜಿ ಸಲ್ಲಿಕೆಗೆ ಕೊನೆ ದಿನ.