ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಕಿರಣ ಬೆಲ್ಲದ್ ಅವರ ಮೊಬೈಲಿನಲ್ಲಿ ಅನೇಕ ಅಶ್ಲೀಲ ವಿಡಿಯೋಗಳಿದ್ದು, ಅದೇ ಅವರ ದಾಂಪತ್ಯಕ್ಕೆ ಮುಳುವಾಗಿದೆ. ಆ ವಿಡಿಯೋ ನೋಡಿದ ರೂಪಾ ಶಿರ್ಸಿಕರ್ ಅವರು ಪತಿಯ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಕಿರಣ ಬೆಲ್ಲದ್ ಹಾಗೂ ರೂಪಾ ಶಿರ್ಸಿಕರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅಂಬಾಗಿರಿಯ ಮಂಗಲಾ ನಾಯ್ಕ ಅವರ ಜೊತೆ ಕಿರಣ ಬೆಲ್ಲದ್ ಅವರು ಆತ್ಮೀಯವಾಗಿರುವುದು ದಾಂಪತ್ಯ ಹಾಳಾಗಲು ಮುಖ್ಯ ಕಾರಣ ಎನ್ನುವ ರೀತಿ ಅವರು ದೂರಿದ್ದಾರೆ. ಶಿರಸಿಯ ಮಾರಿಕಾಂಬಾ ದೇವಸ್ಥಾನದ ಎದುರು ಕಿರಣ ಶಿವಮ್ಮ ಬೆಲ್ಲದ್ ಅವರು ವಾಸವಾಗಿದ್ದಾರೆ. ಕಿರಣ ಬೆಲ್ಲದ್ ಅವರು ಬನವಾಸಿ ರಸ್ತೆಯ ಶಿರ್ಸಿಕರ್ ಕಾಲೋನಿಯ ರೂಪಾ ಶಿರ್ಸಿಕರ್ ಅವರನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದ್ದಾರೆ. 2026ರ ಜುಲೈ 23ರಂದು ಕೇರಳದ ಭಾಗತಿ ದೇಗುಲದಲ್ಲಿ ಸಂಪ್ರದಾಯಬದ್ಧವಾಗಿ ಅವರ ವಿವಾಹ ನಡೆದಿದೆ. ಅವರ ದಾಂಪAತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದು, ಆರಂಭದಲ್ಲಿ ಅವರ ಸಂಸಾರ ಸರಿಯಾಗಿಯೇ ನಡೆದಿದೆ.
ಮದುವೆಗೂ ಮುನ್ನ ಕಿರಣ ಬೆಲ್ಲದ್ ಅವರು `ತಾನು ರಿಯಲ್ ಎಸ್ಟೇಟ್ ಮಾಡಿಕೊಂಡಿರುವೆ. ಸಾಕಷ್ಟು ಜಮೀನು ಇದೆ. ನಾನು ಸಿರಿವಂತ’ ಎಂದು ಹೇಳಿದ್ದಾರೆ. ಅದನ್ನು ನಂಬಿ ರೂಪಾ ಮಹೇಶ ಶಿರ್ಸಿಕರ್ ಅವರು ಕಿರಣ ಬೆಲ್ಲದ್ ಅವರನ್ನು ಮದುವೆ ಆಗಿದ್ದಾರೆ. ಆದರೆ, ಕಿರಣ ಬೆಲ್ಲದ್ ಅವರು ಕ್ರಮೇಣ ಬದಲಾಗಿದ್ದು, ಮನೆ ಬಾಡಿಗೆಯನ್ನು ಸಹ ನೀಡಿಲ್ಲ. ಪತ್ನಿ ಆಸ್ಪತ್ರೆಗೆ ಹೋದರೂ ಅದರ ಖರ್ಚು ಕೊಡುತ್ತಿರಲಿಲ್ಲ. ಮನೆಗೆ ಅಗತ್ಯ ಕಿರಾಣಿ ಸಾಮಗ್ರಿ ಸಹ ತರುತ್ತಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, `ನಿನ್ನ ತವರು ಮನೆಯಿಂದ ಕಾಸು ಕೊಡಿಸು’ ಎನ್ನುತ್ತಿದ್ದರು. ಅದಾದ ನಂತರ `ಖರ್ಚಿಗೆ ಕಾಸು ಕೊಡು’ ಎಂದು ರೂಪಾ ಶಿರ್ಸಿಕರ್ ಅವರಿಗೆ ಪೀಡಿಸಲು ಶುರು ಮಾಡಿದ್ದರು.
ಅದಾದ ನಂತರ ಕಿರಣ ಬೆಲ್ಲದ್ ಅವರು ದಿನವಿಡೀ ಇಸ್ಪಿಟ್ ಕ್ಲಬ್’ನೊಳಗೆ ಕೂರುತ್ತಿದ್ದರು. ರಾತ್ರಿ ಮಾತ್ರ ಮನೆಗೆ ಬರುವುದನ್ನು ರೂಢಿಸಿಕೊಂಡಿದ್ದರು. `ತವರುಮನೆ ಆಸ್ತಿ ಮಾರಿ ಹಣ ಕೊಡುವಂತೆ ಪತ್ನಿಯನ್ನು ಪೀಡಿಸಲು ಶುರು ಮಾಡಿದ್ದರು. ಈ ನಡುವೆ ಒಮ್ಮೆ ರೂಪಾ ಶಿರ್ಸಿಕರ್ ಅವರು ಪತಿಯ ಮೊಬೈಲ್ ನೋಡಿದ್ದು, ಕಿರಣ ಬೆಲ್ಲದ್ ಅವರಿಗೆ ಅನೇಕ ವಿವಾಹಿತ ಮಹಿಳೆ ಜೊತೆ ಸಂಬAಧವಿರುವುದು ಗೊತ್ತಾಯಿತು. ಅವರ ಮೊಬೈಲಿನಲ್ಲಿ ಅನೇಕರ ಖಾಸಗಿ ಫೋಟೋ-ಸಂದೇಶಗಳಿದ್ದವು. ಅದನ್ನು ಪ್ರಶ್ನಿಸಿದಾಗ `ಅದನ್ನೆಲ್ಲ ನೀ ಪ್ರಶ್ನಿಸಬೇಡ’ ಎಂದು ಕಿರಣ ಬೆಲ್ಲದ್ ಅವರು ಬೆದರಿಸಿದ್ದರು.
ಈ ನಡುವೆ ಅಂಬಾಗಿರಿಯ ಮಂಗಲಾ ನಾಯ್ಕ ಅವರು ಕಿರಣ ಬೆಲ್ಲದ್ ಅವರಿಗೆ ಪದೇ ಪದೇ ಫೋನು ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದಾಗ `ಆಕೆ ತನ್ನ ತಂಗಿ’ ಎಂದು ಕಿರಣ ಬೆಲ್ಲದ್ ಅವರು ಪತ್ನಿ ಬಳಿ ಹೇಳಿದ್ದರು. ಮತ್ತೊಮ್ಮೆ ಗಂಡನ ಮೊಬೈಲ್ ತೆಗೆದು ನೋಡಿದಾಗ ಅಲ್ಲಿ ಅಶ್ಲೀಲ ಮೆಸೆಜ್ ಹಾಗೂ ಅಶ್ಲೀಲ ವಿಡಿಯೋಗಳು ಕಾಣಿಸಿದವು. ಈ ಬಗ್ಗೆ ಪ್ರಶ್ನಿಸಿದಾಗ ಕಿರಣ ಬೆಲ್ಲದ್ ಅವರು ರೂಪಾ ಶಿರ್ಸಿಕರ್ ಅವರ ಕೂದಲು ಹಿಡಿದು ಹೊಡೆದು ಕಾಲಿನಿಂದ ಒದ್ದಿದ್ದರು. ಅಗಸ್ಟ 9ರಂದು ರೂಪಾ ಶಿರ್ಸಿಕರ್ ಅವರು ಮಕ್ಕಳ ಜೊತೆ ಹೊರಗೆ ಹೋದಾಗ ಕಪ್ಪು ಕಾರಿನಲ್ಲಿ ಬಂದ ಮಂಗಲಾ ನಾಯ್ಕ ಅವರು ಬನವಾಸಿ ರಸ್ತೆಯ ಸಿರ್ಸಿಕರ್ ಕಾಲೋನಿ ಬಳಿ ಅಡ್ಡಹಾಕಿದರು. ಗಂಡನ ಬಗ್ಗೆ ಕೆಟ್ಟ ಮಾತುಗಳನ್ನಾಡಿದರು.
ಇದನ್ನು ಸಹಿಸದ ರೂಪಾ ಶಿರ್ಸಿಕರ್ ಅವರು ಗಂಡನಿಗೆ ಫೋನ್ ಮಾಡಿದ್ದು, `ಮನೆ ಬಿಟ್ಟು ರಸ್ತೆಗೆ ಏಕೆ ಬಂದೆ?’ ಎಂದು ಅವರ ಕಿರಣ ಬೆಲ್ಲದ್ ಅವರು ಪ್ರಶ್ನಿಸಿದರು. `ನಿನ್ನ ಮುಗಿಸಿದರೆ ನನಗೆ ಆಸ್ತಿ ಬರುತ್ತದೆ’ ಎಂದು ಕಿರಣ ಬೆಲ್ಲದ್ ಅವರು ಹೇಳಿದರು. ಪತಿ ಸುಧಾರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ರೂಪಾ ಅವರು ಯಾವುದೇ ಬದಲಾವಣೆ ಕಾಣದ ಕಾರಣ ಪೊಲೀಸರ ಮೊರೆ ಹೋದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಎಲ್ಲಾ ವಿಷಯದ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿದ್ದಾರೆ.
`ಅಶ್ಲೀಲ ವಿಡಿಯೋ ಪ್ರಸಾರ-ಸಂಗ್ರಹ ಅಪರಾಧ’