ಕಾಗೇರಿ ಬಳಿ ಬಸ್ಸು ಹಾಗೂ ಬುಲೆರೋ ನಡುವೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬುಲೇರೋ ನುಜ್ಜು ನೂರಾಗಿದ್ದು, ಬಸ್ಸಿನಲ್ಲಿದ್ದ ಅನೇಕರಿಗೆ ಗಾಯಗಳಾಗಿವೆ.
ಶಿರಸಿ ತಾಲೂಕಿನ ಕಾಗೇರಿ ಸಮೀಪ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಸ್ ಹಾಗೂ ಬುಲೆರೋ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಬುಲೆರೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಅಲ್ಲಲ್ಲಿ ಗಾಯವಾಗಿದೆ. ಕೆಂಚಗದ್ದೆಯಿoದ ಶಿರಸಿ ಕಡೆ ಸಾಗುತ್ತಿದ್ದ ಬರೂರು-ಕೆಂಚಗದ್ದೆ ಬಸ್ ಹಾಗೂ ಬರೂರು ಕಡೆಗೆ ತೆರಳುತ್ತಿದ್ದ ಬುಲೆರೋ ವಾಹನ ನಡುವೆ ಈ ಅವಘಡ ನಡೆದಿದೆ. ಕಾಗೇರಿ ಸಮೀಪದ ತಿರುವಿನಲ್ಲಿ ವಾಹನದ ನಿಯಂತ್ರಣ ತಪ್ಪಿರುವುದು ಅಪಘಾತಕ್ಕೆ ಕಾರಣ. ಡಿಕ್ಕಿಯ ತೀವ್ರತೆಗೆ ಬುಲೆರೋ ವಾಹನ ಜಖಂಗೊ0ಡಿದ್ದು, ಚಾಲಕನ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ.
ಬಸ್ಸಿನಲ್ಲಿದ್ದ ಪ್ರಯಾಣಿಕರ ಆರೋಗ್ಯವನ್ನು ಸ್ಥಳೀಯರು ವಿಚಾರಿಸಿದ್ದಾರೆ. ಗಾಯಗೊಂಡವರನ್ನು ಅಲ್ಲಿದ್ದವರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ ಮಾತ್ರವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣ ಯಾರು? ಯಾವ ಕಾರಣಕ್ಕೆ ಈ ಅಪಘಾತ ನಡೆಯಿತು? ಎನ್ನುವುದರ ಬಗ್ಗೆ ತನಿಖೆ ನಡೆದಿದೆ.
`ನಿಧಾನವಾಗಿ ವಾಹನ ಓಡಿಸಿ’