RNS ಮೋಟಾರ್ಸ’ನಲ್ಲಿ ಕೆಲಸ ಮಾಡುವ ಅಲ್ತಾಪ್ ನಾಯಕನವಾಡಿ ಅವರು ಇನ್ನಿತರ ಜೊತೆ ಗುಂಪು ಕಟ್ಟಿಕೊಂಡು ತಾರಗೋಡು ಬಳಿಯ ಕಾರ್ತಿಕ್ ಪೂಜಾರಿ ಅವರಿಗೆ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾರ್ತಿಕ್ ಪೂಜಾರಿ ಅವರು ಪ್ರತಿ ದಾಳಿ ಮಾಡಿದ್ದಾರೆ. ಶಿರಸಿ ಮಾರಿಕಾಂಬಾ ದೇಗುಲದ ಪಾರ್ಕಿಂಗ್ ಪ್ರದೇಶದಲ್ಲಿ ಈ ಹೊಡೆದಾಟ ನಡೆದಿದೆ.
ಶಿರಸಿಯ ಕೆಇಬಿ ಕ್ವಾಟರ್ಸಿನಲ್ಲಿ ಅಲ್ತಾಪ್ ಅಬ್ದುಲ್ ರಜಾಕ್ ನಾಯಕವಾಡಿ ಅವರು ವಾಸವಾಗಿದ್ದಾರೆ. 18ವರ್ಷದ ಅವರು ಆರ್ಎನ್ಎಸ್ ಮೋಟಾರ್ಸಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಶಿರಸಿ ತಾರಗೋಡು ನಡಗೋಡಿನಲ್ಲಿ ಕಾರ್ತಿಕ್ ಗಣಪತಿ ಪೂಜಾರಿ ಅವರು ವಾಸವಾಗಿದ್ದಾರೆ. 19 ವರ್ಷದ ಗಣಪತಿ ಪೂಜಾರಿ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾರೆ. ಅಲ್ತಾಪ್ ನಾಯಕನವಾಡಿ ಹಾಗೂ ಕಾರ್ತಿಕ್ ಪೂಜಾರಿ ಅವರ ನಡುವೆ ದ್ವೇಷ ಶುರುವಾಗಿದ್ದು, ಅದೇ ದ್ವೇಷದಲ್ಲಿ ಅಲ್ತಾಪ್ ನಾಯಕವಾಡಿ ದಾಳಿ ಮಾಡಿದ್ದಾರೆ. ಕಾರ್ತಿಕ್ ಪೂಜಾರಿ ಅವರು ಸಹ ಈ ವೇಳೆ ಪ್ರತಿ ದಾಳಿ ನಡೆಸಿದ್ದಾರೆ.
ಅಕ್ಟೊಬರ್ 1ರ ರಾತ್ರಿ 10.30ಕ್ಕೆ ಶಿರಸಿ ಮಾರಿಕಾಂಬಾ ದೇಗುಲದ ಸಮೀಪ ಈ ಹೊಡೆದಾಟ ನಡೆದಿದೆ. ದೇವಸ್ಥಾನ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ಗಣಪತಿ ಪೂಜಾರಿ ಅವರ ಮೇಲೆ ಅಲ್ತಾಪ್ ನಾಯಕನವಡಿ ಅವರ ನಡುವೆ ಹೊಡೆದಾಟ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನಲೆ ಈ ದಾಳಿ ನಡೆದಿರುವ ಬಗ್ಗೆ ಅಂದಾಜಿಸಲಾಗಿದೆ.
ಈ ಹೊಡೆದಾಟ ನೋಡಿದ ಶಿರಸಿ ಪೊಲೀಸರು ಅದನ್ನು ತಪ್ಪಿಸಿದ್ದಾರೆ. ಸಹಾಯಕ ಪೊಲೀಸ್ ನಿರೀಕ್ಷಕ ಸುರೇಶ ಗೊಂಜಾಳಿ ಅವರು ಆ ಯುವಕರಿಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಹೊಡೆದಾಟ ನಡೆದ ಕಾರಣ ಕಾನೂನು ಸುವ್ಯಸವಸ್ಥೆಗೆ ಸಮಸ್ಯೆಯಾಗಿದೆ. ಈ ಹಿನ್ನಲೆ ಆ ಯುವಕರ ವಿರುದ್ಧ ಪೊಲೀಸರು ಸುಮೋಟೋ ಕೇಸು ದಾಖಲಿಸಿದ್ದಾರೆ.