ಜೊಯಿಡಾ ಕರಂಬಾಳದ ಶಾಂಗ್ರೀಲಾ ರೆಸಾರ್ಟಿನಲ್ಲಿ ಊಟ ಮಾಡಿದ್ದ ಗೋವಾದ ವ್ಯಕ್ತಿಯೊಬ್ಬರು ವಾಂತಿ ಮಾಡಿಕೊಂಡು ಸಾವನಪ್ಪಿದ್ದಾರೆ. ಅದೇ ರೆಸಾರ್ಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಮನೋಜ ಮರಾಠೆ ಅವರನ್ನು ಎರಡೆರಡು ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ.
ಗೋವಾದ ಮಾಪುಸಾ ಗಂಗಾನಗರದಲ್ಲಿ ಮನೋಜ ವಿಷ್ಣು ಮರಾಠೆ ಅವರು ವಾಸವಾಗಿದ್ದರು. 43 ವರ್ಷದ ಅವರು ಜೊಯಿಡಾಗೆ ಆಗಮಿಸಿದ್ದು, ಕರಂಬಾಳದ ಶಾಂಗ್ರೀಲಾ ರೆಸಾರ್ಟಿನಲ್ಲಿ ಕೆಲಸಕ್ಕೆ ಸೇರಿದ್ದರು. ಕುಟುಂಬದವರ ಜೊತೆ ಅವರು ಹೆಚ್ಚಿಗೆ ಬೆರೆಯುತ್ತಿರಲಿಲ್ಲ. ಮನೆಯವರಿಗೆ ಆಗಾಗ ಮಾತ್ರ ಫೋನ್ ಮಾಡುತ್ತಿದ್ದರು. ಕಳೆದ ಎರಡು ತಿಂಗಳಿನಿAದ ಅವರು ಶಾಂಗ್ರೀಲಾ ರೆಸಾರ್ಟಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಅಕ್ಟೊಬರ್ 3ರ ರಾತ್ರಿ ಊಟ ಮಾಡಿದ ಅವರು ರೆಸಾರ್ಟ ಹೊರಗೆ ಕುಳಿತಿದ್ದರು. ರಾತ್ರಿ 11.50ರ ವೇಳೆಗೆ ಅವರು ಏಕಾಏಕಿ ವಾಂತಿ ಮಾಡಲು ಶುರು ಮಾಡಿದರು.
ಕಫ ಉಗಿದು ವಾಂತಿ ಮಾಡುತ್ತಿದ್ದ ಮನೋಜ ಮರಾಠೆ ಅವರನ್ನು ರೆಸಾರ್ಟ ಮ್ಯಾನೇಜರ್ ಹಾಗೂ ಇನ್ನಿತರ ಸಿಬ್ಬಂದಿ ನೋಡಿದರು. ಅವರನ್ನು ತಕ್ಷಣ ಆನಮೋಡು ಆಸ್ಪತ್ರೆಗೆ ಕರೆದೊಯ್ದರು. ಪರಿಸ್ಥಿತಿ ಬಿಗಡಾಯಿಸಿದ ಕಾರಣ ಮನೋಜ ಮರಾಠೆ ಅವರನ್ನು ರಾಮನಗರ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರೊಳಗೆ ಮನೋಜ ಮರಾಠೆ ಅವರು ಉಸಿರು ನಿಲ್ಲಿಸಿದ್ದರು. ಅವರ ಸಾವಿಗೆ ನೈಜ ಕಾರಣ ಏನು ಎಂಬುದು ಗೊತ್ತಾಗಲಿಲ್ಲ.