ಹಳಿಯಾಳದಿಂದ ಯಲ್ಲಾಪುರಕ್ಕೆ ಬಂದಿದ್ದ ಮಾರ್ಟಿನ್ ಕೆಸರೊಳ್ಳಿಕರ್ ಅವರ ಬೈಕಿಗೆ ಅಪರಿಚಿತ ಗಾಡಿ ಡಿಕ್ಕಿ ಹೊಡೆದಿದೆ. ಆ ಡಿಕ್ಕಿ ರಭಸಕ್ಕೆ ಮಾರ್ಟಿನ್ ಕೆಸರೊಳ್ಳಿಕರ್ ಅವರು ಪ್ರಾಣ ಬಿಟ್ಟಿದ್ದಾರೆ.
ಹಳಿಯಾಳದ ಬಾಳೆಶೆಟ್ಟಿಕೊಪ್ಪದಲ್ಲಿ ಮಾರ್ಟಿನ್ ಸಂತಾನ ಕೆಸರೊಳ್ಳಿಕರ್ ಅವರು ವಾಸವಾಗಿದ್ದರು. ಅಕ್ಟೊಬರ್ 7ರಂದು ಅವರು ಯಲ್ಲಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಮಧ್ಯಾಹ್ನ 1.30ರ ವೇಳೆಗೆ ತಾಟವಾಳದಿಂದ 1ಕಿಮೀ ದೂರದಲ್ಲಿ ಅವರ ಬೈಕಿಗೆ ಅಪರಿಚಿತ ವಾಹನ ಗುದ್ದಿತು. ಆ ಅಪಘಾತದ ರಭಸಕ್ಕೆ ಮಾರ್ಟಿನ್ ಕೆಸರೊಳ್ಳಿಕರ್ ಅವರು ಕೊನೆಯುಸಿರೆಳೆದರು.
ಕೆಗೆದಾಳದ ಜೋಸನ್ ಪ್ರಾನ್ಸಿಸ್ ಸಿದ್ದಿ ಅವರು ರಸ್ತೆ ಪಕ್ಕ ಬೈಕ್ ಬಿದ್ದಿರುವ ಮಾಹಿತಿ ಸಂಗ್ರಹಿಸಿದರು. ಅಪಘಾತದ ಬಗ್ಗೆ ಅವರು ಚೇತನ ಸಂತಾನ ಕೆಸರೊಳ್ಳಿಕರ್ ಅವರಿಗೆ ಫೋನ್ ಮಾಡಿದರು. ಚೇತನ ಕೆಸರೊಳ್ಳಿಕರ್ ಅವರು ತಮ್ಮ ಚಿಕ್ಕಪ್ಪ ಇಶಾಂತಿ ಕೆಸರೊಳ್ಳಿಕರ್ ಅವರ ಜೊತೆ ಯಲ್ಲಾಪುರಕ್ಕೆ ಬಂದರು. ಶವಾಗಾರದಲ್ಲಿ ಮಾರ್ಟಿನ್ ಕೆಸರೊಳ್ಳಿಕರ್ ಅವರ ಶವ ನೋಡಿ ಅವರು ಕಣ್ಣೀರಾದರು. ತಲೆಗೆ ಗಂಭೀರ ಗಾಯಗೊಂಡು ಅವರು ಸಾವನಪ್ಪಿರುವುದನ್ನು ಖಚಿತಪಡಿಸಿಕೊಂಡರು. ಸೂರೇಶ ಜೂಜೆ ಸಿದ್ದಿ ಅವರನ್ನು ಕೇಳಿದಾಗ ರಸ್ತೆ ಪಕ್ಕ ಶವ ಇದ್ದದನ್ನು ತಾವು ನೋಡಿರುವುದಾಗಿ ಹೇಳಿದರು.
ಅಪರಿಚಿತ ವಾಹನ ಸವಾರ ಅಪಘಾತಪಡಿಸಿ ನಂತರ ಪರಾರಿಯಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿದರು. ಅಪಘಾತಕ್ಕೆ ಕಾರಣವಾದ ವಾಹನದ ಶೋಧ ಶುರು ಮಾಡಿದರು.