ನರೆಗಾ ಯೋಜನೆ ಮುಗಿದು ವಿಬಿಜಿರಾಮ್ ಜಿ ಅನುಷ್ಟಾನವಾಗುತ್ತಿದೆ. ಗ್ರಾ.ಪಂ ಹಂತದಲ್ಲಿ ಕಾಮಗಾರಿಗಳ ಪ್ರಗತಿ ಕಾಣದೇ ಇರುವದು ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯತ ಅಧಿಕಾರಿಗಳಿಗೆ ಬಿಸಿ ತುಪ್ಪವಾಗಿದೆ. ಅದಕ್ಕಾಗಿ ವಿಡಿಯೋ ಸಭೆ, ವಿಚಾರಣಾ ಸಭೆ, ನೋಟಿಸ್ ಜಾರಿಯಂತ ಒತ್ತಡ ತಂತ್ರಕ್ಕೆ ಇಳಿದಿರುವದು ಕಂಡು ಬಂದಿದೆ. ನರೆಗಾ ಯೋಜನೆಯಂತೆ ವಿಬಿಜಿರಾಮ್ ಜಿ ಯೋಜನೆಯು ಬೇಡಿಕೆ ಆಧಾರಿತವಾಗಿದೆ. ಕೂಲಿಗಳು ಬೇಡಿಕೆ ಸಲ್ಲಿಸಿದಲ್ಲಿ ಅಕುಶಲಕೆಲಸವನ್ನು ನೀಡುವದಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳಿಯಾಳ, ಮುಂಡಗೋಡ ತಾಲೂಕಿನ ಕೆಲವು ಗ್ರಾ.ಪಂ ಗಳನ್ನು ಹೊರತು ಪಡಿಸಿದಲ್ಲಿ ಉಳಿದೆಡೆ ತೆರೆಯಮರೆಯಲ್ಲಿ ಗುತ್ತಿಗೆದಾರರೇ ಪ್ರಾಧಾನ್ಯವಾಗಿದ್ದಾರೆ.
ಫೋಟೋ ಪೋಸ್ ಗೆ ಜೈ ಕೆಲಸಕ್ಕೆ ಬೈ:
ನರೆಗಾ ಯೋಜನೆಯಲ್ಲಿ ಭ್ರಷ್ಟಾಚಾರವನ್ನು ತಪ್ಪಿಸಲು ಎನ್.ಎಂ.ಎA.ಎಸ್ ತಂತ್ರಾoಶ ಮೂಲಕ ಕೆಲಸಕ್ಕೆ ಬರುವ ಕೂಲಿಗಳ ಫೊಟೋಗಳನ್ನು ತೆಗೆದು ವೆಬ್ ಸೈಟ್ ಗೆ ಅಳವಡಿಸಿದರೆ ಮುಗಿಯಿತು. ಕೆಲಸಕ್ಕೆ ಬರುವವರೆ ಬೇರೆ. ಹಾಗಾಗಿ ಪೋಟೋ ಗೆ ಫೋಸ್ ಕೊಟ್ಟು ಕೆಲಸಕ್ಕೆ ಬಾರದಿದ್ದರೂ ಯಾರಿಗೂ ತಿಳಿಯುತ್ತಿರಲಿಲ್ಲ ಕೆಲಸಕ್ಕೆ ಬಾರದೇ ಇರುವವರು ತೆರೆಯಮರೆಯಲ್ಲಿರುವ ಗುತ್ತಿಗೆದಾರರಿಗೆ ಹಣ ತೆಗೆದುಕೊಡುತ್ತಿದ್ದರು. ನಂತರ ಯಾರ ಯಾರಿಗೆ ಕಪ್ಪ ಸಲ್ಲಬೇಕಿತ್ತೋ ಅವರೆಲ್ಲರಿಗೂ ಹಂಚಿಕೆಯಾಗುತ್ತಿತ್ತು. ಇದು ಈ ವರೆಗೂ ವ್ಯವಸ್ಥಿತ ರೀತಿಯಲ್ಲಿ ನಡೆದುಕೊಂಡು ಬಂದಿತ್ತು. ತೆರೆಮರೆಯಲ್ಲಿರುವ ಗುತ್ತಿಗೆದಾರರಿಗಂತೂ ಇದು ಒಂದು ಉದ್ಯೋಗವಾಗಿ ಸಾಕಷ್ಟು ಅನುಕೂಲತೆಯನ್ನು ಸೃಷ್ಟಿಸಿತ್ತು.
ವಿಬಿಜಿರಾಮಜಿ ನಿರಾಸಕ್ತಿ ಏಕೆ:
ನರೆಗಾದ ಎನ್.ಎಂ.ಎ.ಎಸ್ ದಲ್ಲಿ ಕೆಲಸಕ್ಕೆ ಬಾರದೇ ಇರುವ ಕೂಲಿಗಳನ್ನು ನಿಲ್ಲಿಸಿ ಪೋಟೋ ತೆಗೆಯಲಾಗುತ್ತಿತ್ತು. ಇದನ್ನೆ ಅಸ್ತ್ರವಾಗಿರಿಸಿಕೊಂಡ ಕೆಲವು ಖಾಸಗಿಯವರು ಪ್ರತಿನಿತ್ಯದ ಪೋಟೋವನ್ನು ಡೌನಲೋಡ ಮಾಡಿ ಪಿಡಿಓ ರನ್ನು ಹೆದರಿಸಿರುವದು. ಅರಣ್ಯ ತುಂಬೆಲ್ಲ ಟ್ರಂಚ, ನೆಡುತೋಪು ಮಾಡಿದ್ದೇವೆ, 1,.2.,3, ನೇ ವರ್ಷದ ನೆಡುತೋಪು ನಿರ್ವಹಣೆ ಎಂದು ಕೆಲಸಕ್ಕೆ ಬಾರದವರ ಹೆಸರು ಹಾಕಿದ ಅರಣ್ಯ ಇಲಾಖೆಯವರಿಂದ ಹಣ ಪೀಕಿದ ಉದಾಹರಣೆಗಳು ಎಲ್ಲ ತಾಲೂಕಿನಲ್ಲಿ ನಡೆದಿದೆ. ಇದಕ್ಕೆಲ್ಲಿನ್ನು ಅವಕಾಶವಿಲ್ಲದಾಗಿದೆ. ಆದರೆ ವಿಬಿಜಿರಾಮಜಿ ದಲ್ಲಿ ಕೆಲಸಕ್ಕೆ ಬರುವ ಪ್ರತಿ ಕೂಲಿಗಳ ಫೆಸ್ ಪೋಟೋ ಕಡ್ಡಾಯ ಮಾಡಲಾಗಿದೆ. ಇಲ್ಲಿ ಗುತ್ತಿಗೆದಾರರಿಗೆ ಗೋಲಮಾಲ್ ಸಾಧ್ಯವಿಲ್ಲದಾಗಿದೆ. ಖಜಾನೆಮೂಲಕ ಹಣಪಾವತಿ. ಸಕಾಲದಲ್ಲಿ ಕೂಲಿ ಹಣ ಪಾವತಿಯಾಗದೇ ಇರುವದು. ಕೂಲಿಗಳ ನಿರಾಸಕ್ತಿ, ವರ್ಷಗಟ್ಟಳೆ ಕಾಲ ಸಾಮಗ್ರಿ ಬಿಲ್ ಬಾಕಿ ಇರುವದು, ಯೋಜನೆಯಲ್ಲಿ ಕೆಲಸ ಸೃಷ್ಟಿಗಿಂತ ಸಾಮಗ್ರಿ ಮೊತ್ತ ಹೆಚ್ಚಿದೆ.
ಗುತ್ತಿಗೆದಾರರಿಗೆ ಕೆಲಸಕ್ಕೆ ಬಂದ ಕೂಲಿಗಳು ಹಣ ತೆಗೆದು ಕೊಡದಿರುವದು, ಮಳೆಗಾಲದ ಅವಧಿ ನೆಲ ಅಗೆದರೂ ನೀರು ಬರುವದು, ಪದೇ ಪದೇ ತಾ.ಪಂ ಮತ್ತು ಜಿ.ಪಂ ಅಧಿಕಾರಿಗಳಿಂದ ಆಗುತ್ತಿರುವ ಕಿರಿಕಿರಿ, ವಿಚಾರಣೆ ಹಾಗೂ ಕಾರಣಕೇಳಿ ನೋಟಿಸ ನಿಂದ ಪಿ.ಡಿ.ಓ ಗಳು ಸಂಪೂರ್ಣವಾಗಿ ಹೈರಾಣಾಗುವಂತಾಗಿದೆ. ಆದರೆ ಜಿ.ಪಂ ಮತ್ತು ತಾ.ಪಂ ಅಧಿಕಾರಿಗಳು ಮಾತ್ರ ಪಿಡಿಓ ರವರ ಕಷ್ಟಕವನ್ನು ಕೇಳುವ ರೀತಿಯಲ್ಲಿ ಇಲ್ಲದ ಕಾರಣ ಪಿಡಿಓ ಸಂಘದವರು ಅಸಹಕಾರ ಚಳುವಳಿಯನ್ನು ನಡೆಸಲು ಮುಂದಾಗಿರುವದು ಒಟ್ಟಾರೆಯಾಗಿ ಪಂಚಾಯತ ಮತ್ತು ತಾಲೂಕಾ ಪಂಚಾಯತ ಅಧಿಕಾರಿಗಳು ತಮ್ಮ ಮೇಲಿನವರ ಒತ್ತಡ ತಪ್ಪಿಸಿಕೊಳ್ಳಲು ಕೂಲಿಗಳಿಂದ ಬೇಡಿಕೆ ಇಲ್ಲದ ಯೋಜನೆಗೆ ಕಚೇರಿ ವಿಚಾರಣೆ,ಒತ್ತಡ, ನೋಟಿಸ ಜಾರಿ, ತಂತ್ರದ ಮೂಲಕ ಬೇಡಿಕೆ ಸೃಷ್ಟಿಸಲು ಮುಂದಾಗಿದ್ದಾರೆ ಎನ್ನುವದು ಸುಳ್ಳಲ್ಲ.