ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆಗೆ ಮೀಸಲಾತಿ ಪ್ರಕಟವಾಗಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳಲ್ಲಿ ಚುನಾವಣಾ ಸಿದ್ದತೆ ಜೋರಾಗಿದೆ. ಈ ಮೂರು ಕಡೆ ಆಕಾಂಕ್ಷಿಗಳಿoದ ಟಿಕೆಟ್ ಪೈಪೋಟಿ ಶುರುವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿವಿಧ ಪಕ್ಷಗಳು ಆಸಕ್ತಿವಹಿಸಿದ್ದು, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ಹುಡುಕಾಟ ನಡೆಸಿವೆ.
ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆಗಾಗಿ ಅನೇಕ ಆಕಾಂಕ್ಷಿಗಳು ಕಾದಿದ್ದರು. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು? ಯಾರ ವಿರುದ್ಧ ಸ್ಪರ್ಧಿಸಬೇಕು? ಎನ್ನುವ ಲೆಕ್ಕಾಚಾರ ಹಾಕುತ್ತಿದ್ದರು. ಯಾವ ಕ್ಷೇತ್ರಕ್ಕೆ ಮೀಸಲಾತಿ ಬಂದರೆ ಯಾರಿಗೆ ಅನುಕೂಲ? ಯಾರಿಗೆ ನಷ್ಟ? ಎನ್ನುವುದರ ಬಗ್ಗೆಯೂ ಚರ್ಚೆ ನಡೆಸಿದ್ದರು. ಹಲವು ದಿನಗಳಿಂದ ರಾಜಕೀಯ ಚುನಾವಣೆಯ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಇದೀಗ ಮೀಸಲಾತಿ ಪಟ್ಟಿ ಬಿಡುಗಡೆಯಾಗಿರುವುದು ಒಂದು ಹಂತದ ದಿಕ್ಸೂಚಿ ಸ್ಪಷ್ಟವಾಗಿದೆ. ಆ ಅಭ್ಯರ್ಥಿಗಳು ಇದೀಗ ತಮ್ಮ ಭವಿಷ್ಯದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾರ ಮೇಲೆ ಪ್ರಭಾವ ಬೀರಿ ಟಿಕೆಟ್ ಪಡೆಯಬೇಕು? ಎನ್ನುವ ಚಿಂತನೆಯಲ್ಲಿ ಅಭ್ಯರ್ಥಿಗಳಿದ್ದಾರೆ.
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಕೇವಲ ಸ್ಥಳೀಯ ಆಡಳಿತಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲ. ಗ್ರಾಮೀಣ ಭಾಗದಲ್ಲಿ ಪಕ್ಷಗಳ ಸಂಘಟನಾ ಶಕ್ತಿ, ಸ್ಥಳೀಯ ನಾಯಕರ ಪ್ರಭಾವ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗಳ ರಾಜಕೀಯ ಸಿದ್ಧತೆಯ ಮೇಲೂ ಇವುಗಳ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದು ಕ್ಷೇತ್ರದಲ್ಲಿ ದೀರ್ಘಕಾಲದಿಂದ ಜನಸಂಪರ್ಕ ಬೆಳೆಸಿಕೊಂಡಿರುವ ಆಕಾಂಕ್ಷಿಗೆ ಮೀಸಲಾತಿ ಬದಲಾವಣೆಯಾದರೆ, ಅದೇ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗೆ ಅವಕಾಶ ಕರಡು ಅಧಿಸೂಚನೆಯೇ ಅಂತಿಮವಲ್ಲ. ಆಕ್ಷೇಪಣೆ ಬಳಿಕ ಮೀಸಲಾತಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ ಕೆಲವರು ಅಂತಿಮ ಅಧಿಸೂಚನೆಯ ನಿರೀಕ್ಷೆಯಲ್ಲಿದ್ದಾರೆ. ಮೀಸಲಾತಿ ತಿದ್ದುಪಡೆ ಕೋರಿ ಅರ್ಜಿ ಸಲ್ಲಿಕೆಯನ್ನು ನಡೆಸುತ್ತಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳಲ್ಲಿ ಚುನಾವಣಾ ಸಿದ್ದತೆಯ ಚರ್ಚೆ ವೇಗ ಪಡೆದುಕೊಂಡಿದೆ. ಒಂದು ಕ್ಷೇತ್ರದಲ್ಲಿ ದೀರ್ಘಕಾಲದಿಂದಜನಸAಪರ್ಕ ಬೆಳೆಸಿಕೊಂಡಿರುವ ಆಕಾಂಕ್ಷಿಗೆ ಮೀಸಲಾತಿ ಬದಲಾವಣೆಯಾದರೆ ಆಕಾಂಕ್ಷಿಗಳಿAದ ಪರ್ಯಾಯ ಕ್ಷೇತ್ರ ಹುಡುಕಾಟ ಅನಿವಾರ್ಯವಾಗಿದೆ. ಮೀಸಲಾತಿ ಬದಲಾವಣೆಯು ಚುನಾವಣಾ ಕಣದ ಮೊದಲ ರಾಜಕೀಯ ಸವಾಲಾಗಿ ಕಾಣಿಸಿಕೊಂಡಿದೆ. ಕಳೆದ ಬಾರಿ ಸ್ಪರ್ಧಿಸಿ ಗೆದ್ದಿದ್ದ ಅಥವಾ ಈ ಬಾರಿ ಸ್ಪರ್ಧಿಸುವ ಉದ್ದೇಶದಿಂದ ಕ್ಷೇತ್ರ ದಲ್ಲಿ ಸಂಘಟನಾ ಚಟುವಟಿಕೆ ನಡೆಸುತ್ತಿದ್ದ ಕೆಲ ಮಾಜಿ ಸದಸ್ಯರಿಗೆ ಕರಡು ಮೀಸಲಾತಿಯಿಂದ ತಮ್ಮದೇ ಕ್ಷೇತ್ರದಲ್ಲಿ ಅದೇ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗೆ ಅವಕಾಶ ಸೃಷ್ಟಿಯಾಗಲಿದೆ.
ಮತ್ತೊಂದೆಡೆ, ಮೀಸಲಾತಿಯಿಂದ ಅವಕಾಶ ವಂಚಿತರಾದವರು ಬೇರೆ ಕ್ಷೇತ್ರಕ್ಕೆ ತೆರಳಿದರೆ ಅಲ್ಲಿನ ಸ್ಥಳೀಯ ಆಕಾಂಕ್ಷಿಗಳೊAದಿಗೆ ಟಿಕೆಟ್ ಪೈಪೋಟಿ ಉಂಟಾಗುವ ಸಾಧ್ಯತೆಯೂ ಇದೆ. ಆದರೆ ಕರಡು ಅಧಿಸೂಚನೆಯೇ ಅಂತಿಮವಲ್ಲ, ಆಕ್ಷೇಪಣೆಗಳು ಹಾಗೂ ಪರಿಶೀಲನೆಯ ಬಳಿಕ ಮೀಸಲಾತಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ ಕೆಲವರು ಅಂತಿಮ ಅಧಿಸೂಚನೆಯ ನಿರೀಕ್ಷೆಯಲ್ಲಿದ್ದಾರೆ.