ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಆಗ್ರಹಿಸಿ ಆದಿವಾಸಿ ಸಮುದಾಯದವರು ಒಂದಾಗಿದ್ದು, ಎಲ್ಲರೂ ಸೇರಿ ಸಮಾವೇಶ ನೆಡಸಲು ನಿರ್ಧರಿಸಿದ್ದಾರೆ. ಅಕ್ಟೊಬರ್ 25 ಹಾಗೂ 26ರಂದು ಯಲ್ಲಾಪುರದ ಕಾರ್ಮಿಕ ಭವನದಲ್ಲಿ ಆದಿವಾಸಿಗಳ ರಾಜ್ಯ ಸಮ್ಮೇಳನ ನಡೆಯಲಿದೆ.
ಕನಾ9ಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ಎಸ್ ವೈ ಗುರುಶಾಂತ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. `ಕಾಡು, ಭೂಮಿ, ನೀರು ಮತ್ತು ಪ್ರಕೃತಿಯೊಂದಿಗೆ ಸಹಸ್ರಾರು ವಷ9ಗಳಿಂದ ಬದುಕು ಕಟ್ಟಿಕೊಂಡಿರುವ ಆದಿವಾಸಿ ಸಮುದಾಯಗಳು ಸದ್ಯ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿವೆ. ಅರಣ್ಯ ಹಕ್ಕುಗಳ ನಿರಾಕರಣೆ, ಭೂಮಿ ಕಬಳಿಕೆ, ಬಲವಂತದ ಸ್ಥಳಾಂತರ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ಕೊರತೆ, ಭಾಷೆ ಮತ್ತು ಸಂಸ್ಕೃತಿಯ ಮೇಲಿನ ದಾಳಿ ಹಾಗೂ ಸಂವಿಧಾನಾತ್ಮಕ ಹಕ್ಕುಗಳನ್ನು ದುಬ9ಲಗೊಳಿಸುವ ಪ್ರಯತ್ನಗಳು ಆದಿವಾಸಿಗಳ ಬದುಕನ್ನು ಸಂಕಷ್ಟಕ್ಕೆ ತಳ್ಳಿವೆ’ ಎಂದವರು ಹೇಳಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಆದಿವಾಸಿಗಳಿಗೆ ಪೌಷ್ಠಿಕ ಆಹಾರ, ರೇಶನ್ ಸಮಪ9ಕವಾಗಿ ಸಿಗುತ್ತಿಲ್ಲ. ಜಿಲ್ಲೆಯ ಬಹಳಷ್ಟು ಆದಿವಾಸಿಗಳು, ಅರಣ್ಯ ವಾಸಿಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದು ಸರಿಯಲ್ಲ’ ಎಂದವರು ಹೇಳಿದರು. `ಸಿದ್ದಿ, ಗೊಂಡ, ಕುಣಬಿ, ಹಾಲಕ್ಕಿ, ಹಸ್ಲರ್ , ಕುಂಬ್ರಿ ಮರಾಠಿ, ಗೌಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆದಿವಾಸಿಗಳು ಈ ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಅವರ ಬದುಕಿನ ಪ್ರಶ್ನೆ, ಅರಣ್ಯ ಹಕ್ಕು- ಸಮುದಾಯದ ಹಕ್ಕು, ಪರಿಶಿಷ್ಟ ಪಂಗಡ ಮಾನ್ಯತೆ, ವನ್ಯಜೀವಿ ಸಂಘಷ9ಕ್ಕೆ ಪರಿಹಾರೋಪಾಯ, ಆದಿವಾಸಿಗಳ ಐಕ್ಯತೆಯ ಕುರಿತು ಸಮ್ಮೇಳನದಲ್ಲಿ ಚಚೆ9 ನಡೆಯಲಿದೆ’ ಎಂದು ವಿವರಿಸಿದರು.
ರೈತ ಮುಖಂಡ ಶಾಂತಾರಾಮ ನಾಯಕ, ಕಾಮಿ9ಕ ನಾಯಕಿ ಯಮುನಾ ಗಾಂವ್ಕರ, ಸಿದ್ದಿ ಸಮುದಾಯದ ಹೋರಾಟಗಾತಿ9 ಲಕ್ಷ್ಮೀ ಸಿದ್ದಿ ಹಾಗೂ ಲಿಲ್ಲಿ ಸಿದ್ದಿ, ಕುಣಬಿ ಸಮಾಜದ ಮುಖಂಡ ಪ್ರೇಮಾನಂದ ವೇಳಿಪ, ಸಿದ್ದಿ ಸಮಾಜದ ಹಿರಿಯರಾದ ಜಾನ್ ಬಿಳ್ಕಿಕರ ಇದ್ದರು. ಈ ಸಮಾವೇಶಕ್ಕೆ ಅವರು ಎಲ್ಲರನ್ನು ಆಮಂತ್ರಿಸಿದರು.