ಮುಂಡಗೋಡದಲ್ಲಿ 15 ವರ್ಷದ ಬಾಲಕಿಯೊಬ್ಬರಿಗೆ ಹೃದಯಘಾತವಾಗಿದೆ. ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆದರೂ ಅದು ಸಾಧ್ಯವಾಗಿಲ್ಲ.
ADVERTISEMENT
ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯ ಶೇಖರ ಲಮಾಣಿ ಅವರ ಪುತ್ರಿ ಅಂಜನಿ ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಅಸ್ವಸ್ಥಗೊಂಡ ಅಂಜನಿ ಲಮಾಣಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅದು ಫಲ ಕೊಡಲಿಲ್ಲ. ಪ್ರಥಮ ಚಿಕಿತ್ಸೆ ನಂತರ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದಿದ್ದು, ಆ ಆಸ್ಪತ್ರೆ ಸೇರುವ ಮೊದಲೇ ಅವರು ಉಸಿರು ನಿಲ್ಲಿಸಿದ್ದಾರೆ.
ADVERTISEMENT
ಚಿಕ್ಕ ವಯಸ್ಸಿನಲ್ಲಿಯೇ ಅಂಜನಿ ಲಮಾಣಿ ಅವರು ಹೃದಯಘಾತದಿಂದ ಸಾವನಪ್ಪಿದ್ದು, ಅವರ ಕುಟುಂಬಕ್ಕೆ ಆಘಾತ ತಂದಿದೆ. ಹೃದಯ ಸಮಸ್ಯೆಗೆ ಕಾರಣ ಏನು? ಎಂದು ಗೊತ್ತಾಗಿಲ್ಲ. ಬಂಜಾರ ಸಮಾಜದವರು, ವಿವಿಧ ಸಾಮಾಜಿಕ ಕಾರ್ಯಕರ್ತರು ಬಾಲಕಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.