ಅಂತ್ರವಳ್ಳಿಯಲ್ಲಿ ಮೇವಿಗೆ ತೆರಳಿದ್ದ ಹಸುಗಳ ಮೇಲೆ ಸಿಡಿಲು ಬಡಿದಿದೆ. ಏಳು ಜಾನುವಾರುಗಳು ಅಲ್ಲಿಯೇ ಸಾವನಪ್ಪಿದೆ.
ADVERTISEMENT
ಅಂತ್ರವಳ್ಳಿಯ ಕೃಷ್ಣ ತುಳಸು ಗೌಡ ಅವರು ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದರು. ಗಂಗಾಧರ ಸುಗ್ಗಿ ಗೌಡ ಅವರು ಸಹ ನಿತ್ಯದ ಹಾಲಿನ ಬಳಕೆಗಾಗಿ ಹಸು ಸಾಕಿದ್ದರು. ಇಲ್ಲಿನ ಬೇಡು ನಾಗು ಗೌಡ ಅವರು ಸಹ ಪ್ರತಿ ದಿನ ಹಸುಗಳ ಆರೈಕೆ ಮಾಡುತ್ತಿದ್ದರು. ಅವರಿಬ್ಬರ ಮಾಲಕತ್ವದ ಜಾನುವಾರುಗಳು ಮೇವು ಅರಿಸಿ ಶುಕ್ರವಾರ ಕಾಡಿಗೆ ಹೋಗಿದ್ದವು. ನಿತ್ಯವೂ ಸಂಜೆ ಕೊಟ್ಟಿಗೆಗೆ ಮರಳುತ್ತಿದ್ದ ಅವರು ಆ ದಿನ ಮರಳಲಿಲ್ಲ.
ADVERTISEMENT
ಅನೇಕ ಬಗೆಯ ಜಾನುವಾರುಗಳನ್ನು ಅವರು ಪ್ರೀತಿಯಿಂದ ಸಾಕಿದ್ದರು. ಶನಿವಾರ ಹುಡುಕಾಟ ನಡೆಸಿದಾಗ ಗುಡ್ಡದ ತಪ್ಪಲ ಮೇಲೆ ಆ ಏಳು ಜಾನುವಾರುಗಳು ಸಾಲಾಗಿ ಶವವಾಗಿದ್ದವು. ಅವೆಲ್ಲವೂ ಸಿಡಿಲು ಬಡಿದು ಉಸಿರು ನಿಲ್ಲಿಸಿದ್ದವು. ಹಾಲು ಕರೆಯುವ ಮೂರು ಆಕಳು, ಒಂದು ಕರು, ಎರಡು ಗೂಳಿ ಸೇರಿ ಒಟ್ಟು ಏಳು ಜಾನುವಾರುಗಳು ಸಾವನಪ್ಪಿದ್ದು ನೋಡಿ ಮಾಲಕರು ಕಣ್ಣೀರಾದರು.
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
ಕುಮಟಾ ಪಶು ವೈದ್ಯಾಧಿಕಾರಿ ವಿ ಕೆ ಹೆಗಡೆ ಅವರು ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಸಿಡಿಲು ಬಡಿದು ಅವು ಸಾವನಪ್ಪಿರುವುದನ್ನು ದೃಢಪಡಿಸಿದರು.