ಮಾಜಾಳಿಯಲ್ಲಿ ಹೇರ್ ಕಟಿಂಗ್ ಅಂಗಡಿ ನಡೆಸುವ ಸಂಶಾದ್ ಎಂಬಾತರು ಬಾಲಕಿಯೊಬ್ಬರನ್ನು ಪೀಡಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಈ ಬಗ್ಗೆ ಪಾಲಕರಿಗೆ ದೂರು ನೀಡಿದ್ದು, ಪಾಲಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕಾರವಾರದ ಮಾಜಾಳಿಯಲ್ಲಿ ಸಂದೀಪ ವರ್ಣೇಕರ್ ಅವರು ವಿವಿಧ ಮಳಿಗೆಗಳನ್ನು ಹೊಂದಿದ್ದಾರೆ. ಆ ಮಳಿಗೆಯಲ್ಲಿ ಉತ್ತರ ಪ್ರದೇಶದ ಸಂಶಾದ ಎಂಬಾತರು ಹೇರ್ ಕಟಿಂಗ್ ಸಲೂನ್ ನಡೆಸುತ್ತಿದ್ದಾರೆ. 10 ವರ್ಷದ ಬಾಲಕಿ ಅಲ್ಲಿ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಆಗಮಿಸಿದ್ದು, ಆ ವೇಳೆ ಸಂಶಾದ್ ತಮ್ಮ ಕೃತ್ಯ ಎಸಗಿದ್ದಾರೆ.
ಸಂತ್ರಸ್ತ ಬಾಲಕಿ ಅಳುತ್ತಲೇ ಮನೆಗೆ ಬಂದಿದ್ದು, ಆಗ ಪಾಲಕರಿಗೆ ವಿಷಯ ಗೊತ್ತಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪಾಲಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವಿಷಯ ಅರಿತು ಆರೋಪಿ ಸಂಶಾದ ಓಡಿ ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಯ ಶೋಧ ಶುರು ಮಾಡಿದ್ದಾರೆ.
ಪ್ರತಿಭಟನೆ: ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಅರಿತ ಊರಿನ ಜನ ಚಿತ್ತಾಕುಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯ ಕೊಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮಾಜಾಳಿ, ವಾಂಗಡ ಸೇರಿ ಸುತ್ತಲಿನ ಅನೇಕ ಗ್ರಾಮದ ಜನ ಪ್ರತಿಭಟನೆಗೆ ಆಗಮಿಸಿ, ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದಾರೆ.