ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಮಂಗಳೂರಿನಿoದ ಬೈಲಹೊಂಗಲಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಯಲ್ಲಾಪುರದಲ್ಲಿ ಸಾವನಪ್ಪಿದ್ದಾರೆ. ಚಲಿಸುವ ಬಸ್ಸಿನಲ್ಲಿಯೇ ಅವರು ಶವವಾಗಿದ್ದಾರೆ.
ಅಕ್ಟೊಬರ್ 18ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ವಸಂತ ಬಾಳಪ್ಪ ಬಂಡಿವಡ್ಡರ್ (63) ಅವರು ಮಂಗಳೂರಿನ ಬಸ್ಸು ಹತ್ತಿದ್ದರು. ಆ ಬಸ್ಸು ಯಲ್ಲಾಪುರ ಮಾರ್ಗವಾಗಿ ಬೈಲಹೊಂಗಲಕ್ಕೆ ಹೊರಟಿತ್ತು. ಅಕ್ಟೊಬರ್ 19ರಂದು ಅವರು ಬಸ್ಸಿನೊಳಗೆ ಶವವಾಗಿದ್ದರು.
ವಸಂತ ಬಾಳಪ್ಪ ಬಂಡಿವಡ್ಡರ್ ಅವರು ಮದ್ಯಪಾನ ಮಾಡುತ್ತಿದ್ದು, ಪಿಡ್ಸ ರೋಗದಿಂದಲೂ ಬಳಲುತ್ತಿದ್ದರು. ಅದೇ ಅವರ ಸಾವಿಗೆ ಕಾರಣವಾಗಿರುವ ಅನುಮಾನಗಳಿವೆ. ಸದ್ಯ ಅವರ ಶವ ಯಲ್ಲಾಪುರದ ಶವಾಗಾರದಲ್ಲಿದ್ದು, ಅದನ್ನು ಬಿಟ್ಟುಕೊಡುವಂತೆ ಮೃತರ ಪುತ್ರ ಬಾಳಪ್ಪ ಬಂಡಿವಡ್ಡರ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

This will close in 6 seconds
You cannot copy content of this page