ಹೊನ್ನಾವರದಲ್ಲಿ ಭಾನುವಾರ ರಾತ್ರಿ ವಿದ್ಯುತ್ ತಂತಿ ಹರಿದುಬಿದ್ದು ದಂಪತಿ ಸಾವನಪ್ಪಿದ್ದಾರೆ. ದೀಪಾವಳಿ ಹಬ್ಬದ ಸಡಗರದಲ್ಲಿದ್ದ ಮನೆಯಲ್ಲಿ ಸೂತಕ ಆವರಿಸಿದೆ.
ADVERTISEMENT
ಭಾನುವಾರ ರಾತ್ರಿ ಹೊನ್ನಾವರ ತಾಲೂಕಿನ ಕಾಸರಕೋಡ ಬಟ್ಟೆ ವಿನಾಯಕ ಕೇರಿಯಲ್ಲಿ ಈ ಅವಘಡ ನಡೆದಿದೆ. ಅಲ್ಲಿ ಸಂತೋಷ ಗೌಡ ಹಾಗೂ ಅವರ ಪತ್ನಿ ಸೀತಾ ಗೌಡ ಸ್ಥಳದಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ADVERTISEMENT
ಸದ್ಯ ಅವರ ಶವ ಆಸ್ಪತ್ರೆಯ ಶವಾಗಾರದಲ್ಲಿದೆ. ಈ ಗಂಡ ಹೆಂಡತಿ ಮರಣಕ್ಕೆ ಹೆಸ್ಕಾಂ ನಿರ್ಲಕ್ಷ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನ್ಯಾಯ ಸಿಗುವವರೆಗೂ ಮೃತದೇಹ ಪಡೆಯುದಿಲ್ಲ ಎಂದು ಕುಟುಂಬದವರು ಪ್ರತಿಭಟನೆ ನಡೆಸುತ್ತಿದ್ದಾರೆ.
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
ಸಾರ್ವಜನಿಕರು ಸಹ ಆಕ್ರೋಶವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಆಸ್ಪತ್ರೆ ಬಳಿ ನೂರಾರು ಜನ ಜಮಾಯಿಸಿದ್ದು, ಇನ್ನಷ್ಟು ಜನ ಬರುತ್ತಿದ್ದಾರೆ.
ಸಂತೋಷ ಗೌಡ ಹಾಗೂ ಸೀತಾ ಗೌಡ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪಾಲಕರ ನಿಧನದಿಂದ ಅವರು ತಬ್ಬಲಿಯಾಗಿದ್ದಾರೆ. ಮೃತರ ಬಂಧು-ಮಿತ್ರರು ಆಸ್ಪತ್ರೆ ಬಳಿ ಜಮಾಯಿಸಿದ್ದು, ಪ್ರತಿಭಟನೆ ಇನ್ನಷ್ಟು ತೀವೃತೆಪಡೆದಿದೆ.