ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಅವರು ಮಹಿಳೆಯೊಬ್ಬರಿಗೆ ಮೆಸೆಜ್ ಮಾಡಿದ್ದಾರೆ. ಇದನ್ನು ಸಹಿಸದ ಮಹಿಳೆ ಮೆಸೆಜ್ ಮಾಡಿದ ಬಗ್ಗೆ ಆಕ್ಷೇಪಿಸಿ ಪೊಲೀಸ್ ದೂರು ನೀಡಿದ್ದಾರೆ.
ಸೋಮೇಶ್ವರ ನಾಯ್ಕ ಅವರು ಯಲ್ಲಾಪುರದ ರವೀಂದ್ರ ನಗರವನ್ನು ಪ್ರತಿನಿಧಿಸಿ ಪಟ್ಟಣ ಪಂಚಾಯತ ಸದಸ್ಯರಾಗಿದ್ದಾರೆ. ಅವರ ವಿರುದ್ಧ ಇದೀಗ ಮಹಿಳೆಯೊಬ್ಬರಿಗೆ ಅಶ್ಲೀಲ ಮೆಸೆಜ್ ಮಾಡಿದ ಆರೋಪ ಎದುರಾಗಿದೆ. ವಾಟ್ಸಪ್ ಮೂಲಕ ಕೆಟ್ಟದಾಗಿ ಮೆಸೆಜ್ ಮಾಡಿದ ಬಗ್ಗೆ ಸಂತ್ರಸ್ತೆ ದೂರಿದ್ದಾರೆ.
`ಯಲ್ಲಾಪುರದ ರವೀಂದ್ರನಗರದ ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ (ಸೋಮು ನಾಯ್ಕ) ತನಗೆ ವಾಟ್ಸಪ್ ನಲ್ಲಿ ಅಶ್ಲೀಲ ಮೆಸೆಜ್ ಕಳುಹಿಸಿದ್ದಾರೆ. ಆ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಮಹಿಳೆ ಯಲ್ಲಾಪುರ ಪೊಲೀಸರಲ್ಲಿ ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನಲೆ ಪೊಲೀಸರು ಸೋಮೇಶ್ವರ ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
You cannot copy content of this page