ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಆದರ್ಶ ಪೂಜಾರಿ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಕಾರವಾರದಿಂದ ಗೋವಾ ಹೋಗಿದ್ದ ಅವರು ಅಲ್ಲಿಂದ ಮರಳುವಾಗ ಬೈಕಿನಿಂದ ಬಿದ್ದು ಪ್ರಾಣ ಬಿಟ್ಟಿದ್ದಾರೆ.
ಕಿಮ್ಸ್ ವಿದ್ಯಾರ್ಥಿಯಾಗಿದ್ದ ಆದರ್ಶ ಪೂಜಾರಿ ಅವರು ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದರು. ಮಂಗಳವಾರ ರಾತ್ರಿ ಆದರ್ಶ ಪೂಜಾರಿ ಅವರು ತಮ್ಮ ಸ್ನೇಹಿತ ರೌನಕ್ ಚಾವ್ಲಾ ಅವರ ಜೊತೆ ಗೋವಾಗೆ ಹೋಗಿದ್ದರು. ಅಲ್ಲಿ ಊಟ ಮುಗಿಸಿದ ಅವರು ಕಾರವಾರಕ್ಕೆ ಮರಳುತ್ತಿದ್ದರು. ಆಗ, ಗೋವಾದ ಮಾಷೆಂ ಬಳಿ ಅವರ ಬೈಕಿಗೆ ಅಡ್ಡಲಾಗಿ ಎಮ್ಮೆ ಬಂದಿದ್ದು, ಬೈಕು ಆ ಎಮ್ಮೆಗೆ ಗುದ್ದಿತು.
ಪರಿಣಾಮ ಆ ಎಮ್ಮೆ ಅಲ್ಲಿಯೇ ಸಾವನಪ್ಪಿತು. ಅದರೊಂದಿಗೆ ಬೈಕು ನಿಯಂತ್ರಣ ತಪ್ಪಿತು. ಬೈಕಿನಲ್ಲಿದ್ದ ಇಬ್ಬರು ನೆಲಕ್ಕೆ ಅಪ್ಪಳಿಸಿದರು. ಗಾಯಗೊಂಡ ಅವರಿಬ್ಬರನ್ನು ಅಲ್ಲಿನ ಜನ ಆಸ್ಪತ್ರೆಗೆ ಸಾಗಿಸಿದರು. ಕಾಣಕೋಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ಕೊಡುವ ಪ್ರಯತ್ನ ನಡೆಯಿತು. ಆದರೆ, ಅಷ್ಟರೊಳಗೆ ಆದರ್ಶ ಪೂಜಾರಿ ಸಾವನಪ್ಪಿದ್ದರು. ಗಂಭೀರ ಗಾಯಗೊಂಡ ರೌನಕ್ ಚಾವ್ಲಾ ಅವರನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
`ನಿಧಾನವಾಗಿ ವಾಹನ ಓಡಿಸಿ’