30ಕ್ಕೂ ಅಧಿಕ ಜನರನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್ಸು ಹೊನ್ನಾವರದ ಬಳಿ ಅಪಘಾತಕ್ಕೀಡಾಗಿದೆ. ಗೇರುಸೊಪ್ಪ ಸೂಳೆಮೂರ್ಕಿ ಕ್ರಾಸ್ ಬಳಿ ಬಸ್ಸು ಹಾಗೂ ಕಾರಿನ ನಡುವೆ ಡಿಕ್ಕಿ ನಡೆದಿದ್ದು, ಬಸ್ಸು ಕಂದಕಕ್ಕೆ ಬಿದ್ದಿದೆ.
ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರಿಗೆ ಸಹ ಪೆಟ್ಟಾಗಿದೆ. ಈ ಬಸ್ಸು ಬೆಂಗಳೂರಿನಿAದ ಭಟ್ಕಳಕ್ಕೆ ಬರುತ್ತಿರುವಾಗ ಅವಘಡ ನಡೆದಿದೆ.
5ಕ್ಕೂ ಅಧಿಕ ಆಂಬುಲೆನ್ಸ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ತರುವ ಕೆಲಸ ನಡೆಯುತ್ತಿದೆ. ಗಂಭೀರವಾಗಿ ಪೆಟ್ಟಾದವರಿಗೆ ಮುತುವರ್ಜಿವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಪಲ್ಟಿಯಾಗಿದ್ದರಿಂದ ಆ ಭಾಗದ ಸಂಚಾರ ಅಸ್ತವ್ಯಸ್ಥವಾಗಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆದಿದೆ.
ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಸಾಹಸ ಮಾಡುತ್ತಿದ್ದಾರೆ. ಅಪಘಾತ ಸ್ಥಳದಲ್ಲಿ ಮೊಬೈಲ್ ನೆಟ್‌ವರ್ಕ ಸಹ ಸಿಗದ ಕಾರಣ ತುರ್ತು ಮಾಹಿತಿ ರವಾನೆಯಾಗುತ್ತಿಲ್ಲ.