ದಾಂಡೇಲಿಯ ಜಿ ಎನ್ ರಸ್ತೆ ಸಮೀಪದ ಮೋರ್ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರನ ಮೂಳೆ ಮುರಿದಿದೆ. ಗಾಯಗೊಂಡ ವ್ಯಕ್ತಿಯನ್ನು ಅಲ್ಲಿನ ಜನ ಆಸ್ಪತ್ರೆಗೆ ಸೇರಿಸಿದ್ದಾರೆ.
ಸೋಮಾನಿ ವೃತ್ತದ ಮಾರ್ಗವಾಗಿ ಬರುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಬೈಕು ಡಿಕ್ಕಿ ಹೊಡೆದಿದೆ. ಎದುರಿನಿಂದ ಬರುತ್ತಿದ್ದ ವ್ಯಕ್ತಿ ಬೈಕಿಗೆ ಗುದ್ದಿ ಅಲ್ಲಿಂದ ಮುಂದೆ ಹೋಗಿದ್ದಾರೆ. ಪರಿಣಾಮ ವಿದ್ಯುತ್ ಚಾಲಿತ ವಾಹನ ಜಖಂ ಆಗಿದ್ದು, ಅದರಲ್ಲಿದ್ದ ಸವಾರರಿಗೆ ಪೆಟ್ಟಾಗಿದೆ.
ಅದಾದ ನಂತರ ಮುಂದೆ ಹೋಗಿದ್ದ ಬೈಕ್ ಸವಾರರು ಮಾರುತಿ ದೇವಸ್ಥಾನದ ಹತ್ತಿರ ತಮ್ಮ ವಾಹನ ನಿಲ್ಲಿಸಿದ್ದಾರೆ. ನಂತರ ಅಪಘಾತ ಸ್ಥಳಕ್ಕೆ ಬಂದಿದ್ದು ಆ ವೇಳೆ ಅವರ ಕಾಲಿನ ಮೂಳೆ ಮುರಿದಿರುವುದು ಗೊತ್ತಾಗಿದೆ. ಹೀಗಾಗಿ ಅವರು ಸಹ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.
ಸ್ಥಳೀಯರು ಆಂಬುಲೆನ್ಸಿಗೆ ಫೋನ್ ಮಾಡಿ, ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ದಾಂಡೇಲಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ.