ಶುಗರ್ ಹೆಚ್ಚಳದಿಂದ ಸಮಸ್ಯೆ ಅನುಭವಿಸುತ್ತಿದ್ದ ಕುಮಟಾದ ಕಮಲಾ ಗೌಡ ಅವರು ಉಸಿರಾಟ ಸಮಸ್ಯೆಯಿಂದ ಸಾವನಪ್ಪಿದ್ದಾರೆ. ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ.
ಕುಮಟಾ ತೊರ್ಕೆ ಮೂಲೆಕೇರಿಯಲ್ಲಿ ಕಮಲಾ ಗೌಡ (56) ಅವರು ವಾಸವಾಗಿದ್ದರು. ಕೆಲ ವರ್ಷಗಳಿಂದ ಅವರಿಗೆ ಶುಗರ್ ಕಾಡುತ್ತಿದ್ದು, ಅದನ್ನು ನಿಯಂತ್ರಿಸುವ ಪ್ರಯತ್ನ ಸರಿಯಾಗಿ ಆಗಿರಲಿಲ್ಲ. ಹೀಗಿರುವಾಗ ನವೆಂಬರ್ 3ರಂದು ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಯಿತು.
ತಾಯಿ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದನ್ನು ಗಮನಿಸಿದ ನಾಗರಾಜ ಗೌಡ ಅವರು ತಮ್ಮ ಮೊಬೈಲ್ ಮಳಿಗೆಗೆ ರಜೆ ಮಾಡಿ, ಆಸ್ಪತ್ರೆಗೆ ಹೋಗುವ ಕೆಲಸ ಮಾಡಿದರು. ಕಮಲಾ ಗೌಡ ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರು. ಆದರೆ, ಆರ್ಮುಡೆ ಸಮೀಪ ತೆರಳುವಾಗ ಅವರ ಉಸಿರಾಟದಲ್ಲಿ ಇನ್ನಷ್ಟು ಸಮಸ್ಯೆಯಾಯಿತು.
ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಸಾವನಪ್ಪಿದರು. ತಾಯಿ ಕಳೆದುಕೊಂಡ ದುಖ:ದ ಬಗ್ಗೆ ನಾಗರಾಜ ಗೌಡ ಅವರು ಗೋಕರ್ಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
`ಆರೋಗ್ಯದ ಕಡೆ ಗಮನಹರಿಸಿ. ಬಿಪಿ, ಶುಗರ್ ನಿಯಂತ್ರಿಸಿ’