ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಹೊನ್ನಾವರದ ಶರಾವತಿ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಗಜಾನನ ಅಂಬಿಗ ಅವರು ನೀರುಪಾಲಾಗಿದ್ದಾರೆ. ಸಾಕಷ್ಟು ಹುಡುಕಾಟದ ನಂತರ ಅವರ ಶವ ಸಿಕ್ಕಿದೆ.
ಹೊನ್ನಾವರದ ಮಂಕಿ ಬಳಿಯ ಅನಿಲಗೋಡ ಮಕ್ಕಿಗದ್ದೆಯಲ್ಲಿ ಗಜಾನನ ರಾಮಾ ಅಂಬಿಗ (58) ಅವರು ವಾಸವಾಗಿದ್ದರು. ಮೀನುಗಾರಿಕೆ ನಡೆಸಿ ಅವರು ಜೀವನ ನಡೆಸುತ್ತಿದ್ದರು. ನವೆಂಬರ್ 4ರಂದು ಅನಿಲಗೋಡದಿಂದ ಹಾದುಹೋದ ಶರಾವತಿ ನದಿಯಲ್ಲಿ ಅವರು ದೋಣಿ ಸಂಚಾರ ಮಾಡಿದ್ದರು.
ಮೀನು ಹಿಡಿಯುವ ವೇಳೆ ಅವರು ನೀರಿನಲ್ಲಿ ಬಿದ್ದು ಮುಳುಗಡೆಯಾಗಿದ್ದು, ಸಾಕಷ್ಟು ಹುಡುಕಾಟ ನಡೆಯಿತು. ಆದರೆ, ಆ ದಿನ ಅವರು ಸಿಗಲಿಲ್ಲ. ನವೆಂಬರ್ 5ರಂದು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದರು. ಆಗ ಗಜಾನನ ಅಂಬಿಗ ಅವರು ಶವವಾಗಿ ಸಿಕ್ಕಿದರು. ಗಜಾನನ ಅಂಬಿಗ ಅವರ ಮಗ ಸುಬ್ರಹ್ಮಣ್ಯ ಅಂಬಿಗ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಂಕಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದರು.

This will close in 6 seconds
You cannot copy content of this page