ಹೊಟೇಲ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಪೆದ್ರು ಸಿದ್ದಿ ಅವರು ತಮ್ಮ 24ನೇ ವಯಸ್ಸಿನಲ್ಲಿಯೇ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಮುಂಡಗೋಡಿನ ಪೆದ್ರು ಸಿದ್ದಿ ಅವರು ಯಲ್ಲಾಪುರದಲ್ಲಿ ನಡೆದ ಅವಘಡದಲ್ಲಿ ಪ್ರಾಣ ಬಿಟ್ಟಿದ್ದಾರೆ.
Advertisement. Scroll to continue reading.
ಮುಂಡಗೋಡಿನ ಉಗ್ಗಿನಕೇರಿಯಲ್ಲಿ ಪೆದ್ರು ಸೆಬೆಸ್ಟಾನ್ ಕಾಮೇಲ್ ಸಿದ್ದಿ ಅವರು ವಾಸವಾಗಿದ್ದರು. ಹೊಟೇಲ್ ಕಾರ್ಮಿಕರಾಗಿ ಅವರು ಕುಟುಂಬ ನಡೆಸುತ್ತಿದ್ದರು. ನವೆಂಬರ್ 5ರ ಸಂಜೆ ಅವರು ಯಲ್ಲಾಪುರದ ಕಿರವತ್ತಿ-ಹುಲಗೋಡು ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸಿಕೊಂಡು ಹೊರಟಿದ್ದರು. ಹುಲಗೋಡಿನ ಬಳಿ ಅವರ ಬೈಕು ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿತು.
ಈ ಅಪಘಾತದಲ್ಲಿ ಪೆದ್ರು ಸಿದ್ದಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ರಾತ್ರಿ ಅವಧಿಯಲ್ಲಿ ಅವರು ಆಸ್ಪತ್ರೆಗೆ ತೆರಳಲಾಗದೇ ಮರದ ಅಡಿಯಲ್ಲಿಯೇ ಸಾವನಪ್ಪಿದರು. ನವೆಂಬರ್ 5ರ ಸಂಜೆ 7.30ರಿಂದ 11.45ಕ್ಕೆ ಅವರು ಸಾವನಪ್ಪಿದ್ದು, ಬಸ್ತಾಂವ್ಯ ಬೆಂಜಿತ್ ಸಿದ್ದಿ ಅವರು ಈ ಬಗ್ಗೆ ಪೊಲೀಸರಿಗೆ ವಿಷಯ ಮುಟ್ಟಿಸಿದರು.
ನವೆಂಬರ್ 6ರ ನಸುಕಿನಲ್ಲಿ ಯಲ್ಲಾಪುರ ಪಿಐ ಪಿಐ ರಮೇಶ ಹಾನಾಪುರ ಹಾಗೂ ಪಿಎಸ್‌ಐ ಸಿದ್ದಪ್ಪ ಗುಡಿ ಸ್ಥಳ ಭೇಟಿ ಮಾಡಿದರು. ಬಸ್ತಾಂವ್ಯ ಬೆಂಜಿತ್ ಸಿದ್ದಿ ಅವರು ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದರು.
`ಹೆಲ್ಮೇಟ್ ಬಳಸಿ-ನಿಧಾನವಾಗಿ ಚಲಿಸಿ’