`ಕನಕದಾಸರು ಸಾರಿದ ಸಮಾನತೆಯ ಬದುಕು ಎಲ್ಲಾ ಧರ್ಮಗಳಿಗೂ ಅನ್ವಯ’ ಎಂದು ಕಾರವಾರ ಧರ್ಮ ಪ್ರಾಂತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿಶೆಪ್ ಡುಮ್ಮಿಂಗ ಡಯಾಸ ಅವರು ಹೇಳಿದ್ದಾರೆ. `ಕನಕದಾಸರ ಆದರ್ಶ ಹಾಗೂ ಭಕ್ತಿ ಮಾರ್ಗ ನಮಗೆಲ್ಲರಿಗೂ ಪ್ರೇರಣೆ’ ಎಂದವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
Advertisement. Scroll to continue reading.
ಶನಿವಾರ ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು `ದಾಸ ಶ್ರೇಷ್ಠರಾದ ಕನಕದಾಸರ ಜಯಂತಿಯನ್ನು ನಾಡಿನ ಎಲ್ಲಡೆ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ದಾಸ ಶ್ರೇಷ್ಠರು ನೀಡಿದ ಸಮಾನತೆಯ ಬದುಕು ಎಲ್ಲಾ ಧರ್ಮಗಳಲ್ಲಿಯೂ ಒಳಿತು ಮಾಡುವ ಸಾರಾಂಶಹೊAದಿದೆ. ಅದನ್ನು ನಾವೆಲ್ಲರೂ ಪಾಲಿಸಬೇಕು’ ಎಂದವರು ಕರೆ ನೀಡಿದರು.
`ಪ್ರತಿಯೊಬ್ಬರಲ್ಲಿಯೂ ಒಳ್ಳೆಯದನ್ನು ಕಾಣುವ ಮನಸ್ಸು ಹಾಗೂ ಭಕ್ತಿಯನ್ನು ನಾವು ಕನಕದಾಸರ ಚಿಂತನೆಯಲ್ಲಿ ನೋಡುತ್ತೇವೆ. ಅವರ ಆದರ್ಶಗಳು ನಮಗೆ ಹಾಗೂ ನಮ್ಮ ಸಮಾಜಕ್ಕೆ ಸದಾ ಅನನುಕರಣೀಯ’ ಎಂದವರು ಸ್ಮರಿಸಿದರು. ಕನಕದಾಸರ ಕುರಿತಾದ ಚಿಂತನೆ ಹಾಗೂ ಕೀರ್ತನೆಗಳನ್ನು ಅವರು ಈ ವೇಳೆ ಪ್ರಸ್ತಾಪಿಸಿದರು. ಕನಕದಾಸರ ಕೀರ್ತನೆ ಹಾಗೂ ಜೀವನ ಚರಿತ್ರೆ ಪ್ರಸ್ತುತಪಡಿಸುವ ಮಕ್ಕಳ ಭಾಷಣ ಗಮನ ಸೆಳೆದವು.
ಸಂಸ್ಥೆಯ ಮುಖ್ಯಾಧ್ಯಾಪಕ ರೇಮಂಡ್ ಫರ್ನಾಂಡಿಸ್ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕ ಆಗ್ನೇಲ್ ಫರ್ನಾಂಡಿಸ್, ಸಹ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ್, ಶಿಕ್ಷಕ ವೆಂಕಟ್ರಮಣ ಭಟ್ಟ ಹಾಗೂ ಎ0 ರಾಜಶೇಖರ್ ಅವರು ವಿವಿಧ ಜವಾಬ್ದಾರಿ ನಿಭಾಯಿಸಿದರು.