ಹುಬ್ಬಳ್ಳಿ-ಅಂಕೋಲಾ ರಾಷ್ಟಿಯ ಹೆದ್ದಾರಿ ಮೇಲೆ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಅಂಕೋಲಾದ ಬೊಗ್ರಿಬೈಲ್ ನವಗದ್ದೆ ಬಳಿ ಪಲ್ಟಿಯಾಗಿದೆ. ಪರಿಣಾಮ ಟ್ಯಾಂಕರ್ ಒಳಗಿದ್ದ ಮಿಥೇನ್ ಗ್ಯಾಸ್ ಸೋರಿಕೆಯಾಗುತ್ತಿದೆ.
Advertisement. Scroll to continue reading.
ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ತುರ್ತು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಸುರಕ್ಷತೆ ಹಿನ್ನಲೆ ಗ್ಯಾಸ್ ಸೋರಿಕೆ ಸ್ಥಳದಿಂದ ಸುತ್ತಲಿನ 1 ಕಿಮೀ ಪ್ರದೇಶದಲ್ಲಿ ಅವರು ಓಡಾಟ ನಿಷೇಧಿಸಿ ಆದೇಶಿಸಿದ್ದಾರೆ. ಗ್ಯಾಸ್ ಸೋರಿಕೆ ಕಾರ್ಯಾಚರಣೆ ಮುಕ್ತಾಯದವರೆಗೆ ಹಾಗೂ ಮುಂದಿನ ಆದೇಶದವರೆಗೆ ಈ ಮಾರ್ಗದ ಸಂಚಾರ ನಿಷೇಧಿಸಲಾಗಿದೆ.
ರಕ್ಷಣಾ ಸಿಬ್ಬಂದಿಹೊರತುಪಡಿಸಿ ಉಳಿದವರು ಇಲ್ಲಿ ಓಡಾಟ ನಡೆಸುವ ಹಾಗಿಲ್ಲ. ವಾಹನಗಳನ್ನು ಸಹ ತಡೆಹಿಡಿಯಲಾಗಿದ್ದು, ಬೊಗ್ರಿಬೈಲ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಓಡಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಕಿಂಚಿತ್ತು ಅವಘಡ ನಡೆಯದಂತೆ ಮುನ್ನಚ್ಚರಿಕೆವಹಿಸಲಾಗಿದೆ.