ಶಶಾಂಕ ನಾಯ್ಕ ಹಾಗೂ ಅಶ್ವಿನಿ ನಾಯ್ಕ ಅವರ ಸಂಸಾರದಲ್ಲಿ ಬಿರುಕು ಮೂಡಿದ್ದು, ರಾಜಿ ಮಾಡಿಸಲು ಹೋಗಿದ್ದ ಅಂಕೋಲಾ ವಂದಿಗೆಯ ವರದರಾಜ ನಾಯಕ ಅವರು 2 ಕೋಟಿ ರೂ ಹಣ ಕೇಳಿದ್ದಾರೆ. ಇದನ್ನು ಕೇಳಿದ ಅಶ್ವಿನಿ ನಾಯ್ಕ ಅವರ ಅತ್ತೆ ಭಾರತಿ ನಾಯ್ಕ ಅವರು ಬೈದು ಕಳುಹಿಸಿದ್ದಾರೆ.
ಗೋಕರ್ಣ ಬಳಿಯ ಹನೇಹಳ್ಳಿಯಲ್ಲಿ ಶಶಾಂಕ ನಾಯ್ಕ ಅವರು ವಾಸವಾಗಿದ್ದಾರೆ. ಗೋಕರ್ಣಕ್ಕೆ ಕೆಲಸ ಮಾಡಲು ಬಂದಿದ್ದ ಬೆಂಗಳೂರಿನ ಅಶ್ವಿನಿ ಅವರನ್ನು ಅವರು ಪ್ರೀತಿಸಿ ಮದುವೆಯಾಗಿದ್ದು, ಅವರಿಬ್ಬರು ಗೋವಾದಲ್ಲಿ ನೆಲಸಿದಾಗ ವೈಮನಸ್ಸು ಉಂಟಾಗಿದೆ. ತಮಗಾದ ಅನ್ಯಾಯದ ಬಗ್ಗೆ ಅಶ್ವಿನಿ ನಾಯ್ಕ ಅವರು ದೂರು ಕೋರ್ಟು-ಕಚೇರಿ ಅಲೆದಾಟ ಶುರು ಮಾಡಿದ್ದಾರೆ. ಹೀಗಿರುವಾಗ ವಂದಿಗೆಯ ವರದರಾಜ ನಾಯಕ ಅವರು ಅವರಿಬ್ಬರ ನಡುವಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಹನೇಹಳ್ಳಿಗೆ ಹೋಗಿದ್ದಾರೆ. ಅಲ್ಲಿದ್ದ ಭಾರತಿ ನಾಯ್ಕ ಅವರ ಬಳಿ 2 ಕೋಟಿ ರೂ ಹಣ ಕೇಳಿದ್ದಾರೆ!
ಜುಲೈ 5ರಂದು ವರದರಾಜ ನಾಯಕ ಅವರು ಹನೇಹಳ್ಳಿಗೆ ಹೋಗಿದ್ದು, ತಮ್ಮೊಂದಿಗೆ ಗೋವಾದ ಸ್ವಯಂ ಸೇವಾ ಸಂಘದ ಮಹಿಳೆಯರಿಬ್ಬರನ್ನು ಕರೆದೊಯ್ದಿದ್ದಾರೆ. ತಾರಾ ಕೇರಕರ್ ಹಾಗೂ ಲೀನಾ ಫರ್ನಾಂಡಿಸ್ ಎಂಬಾತರ ಮೂಲಕವೂ ಭಾರತಿ ನಾಯ್ಕ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನ ಫಲ ಕೊಡದ ಕಾರಣ ಆ ಮೂವರು ಸೇರಿ ಭಾರತಿ ನಾಯ್ಕ ಅವರಿಗೆ ನಿಂದಿಸಿ-ಬೈದು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನು ಓದಿ: ಗೋವಾದಲ್ಲಿ ಗಂಡನ ಕಾಟ: ಗೋಕರ್ಣದಲ್ಲಿ ಅತ್ತೆ ಪಿಕಲಾಟ!
ಈ ಎಲ್ಲಾ ವಿಷಯಗಳ ಬಗ್ಗೆ ಭಾರತಿ ನಾಯ್ಕ ಅವರು ಮಗ ಶಶಾಂಕ ನಾಯ್ಕ ಅವರಲ್ಲಿ ಹೇಳಿದ್ದಾರೆ. ಮನೆಯವರೆಗೂ ಬಂದು ಗಲಾಟೆ ಮಾಡಿದ ಕಾರಣ ಭಾರತಿ ನಾಯ್ಕ ಅವರು ಆ ಮೂವರ ವಿರುದ್ಧ ಕಾನೂನು ಹೋರಾಟ ಶುರು ಮಾಡಿದ್ದಾರೆ.