ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಹಿರೋ ಹೊಂಡಾ ಬೈಕಿನಲ್ಲಿ ಸಾಗಾಟವಾಗುತ್ತಿದ್ದ ಜಿಂಕೆ ಚರ್ಮ.. ಹಂದಿ ಮಾಂಸಕ್ಕೆ ಅರಣ್ಯಾಧಿಕಾರಿಗಳು ತಡೆ ಒಡ್ಡಿದ್ದಾರೆ. ಚರ್ಮ ಹಾಗೂ ಮಾಂಸದ ಜೊತೆ ಐವರನ್ನು ವಶಕ್ಕೆಪಡೆದಿದ್ದಾರೆ.
ಮುಂಡಗೋಡಿನ ಅರಣ್ಯಾಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಾಳೆಕೊಪ್ಪ ಬಳಿಯ ಕರ್ಕಲ ಜಡ್ಡಿಯಲ್ಲಿ ಬೈಕ್ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಕಾಂಡು ಹಂದಿ ಮಾಂಸ ಸಿಕ್ಕಿದೆ. ಆರೋಪಿತರನ್ನು ವಿಚಾರಣೆಗೆ ಒಳಪಡಿಸಿದಾಗ ಜಿಂಕೆ ಚರ್ಮ ಅಡಗಿಸಿರುವುದು ಬೆಳಕಿಗೆ ಬಂದಿದೆ.
ಬಾಳೆಕೊಪ್ಪದ ಕನಕಪ್ಪ ದುರ್ಗಪ್ಪ ಮಾದರ್, ಪರಶುರಾಮ್ ಕನಕಪ್ಪ ಮಾದರ್, ಸೊರಬದ ಸುರೇಶ ದೇವಪ್ಪ ಕೋಡಿಕೊಪ್ಪ, ಶಿವಪುತ್ರಪ್ಪ ಹನುಮಂತಪ್ಪ ಕೋಡಿಕೊಪ್ಪ ತಾಲೂಕ ಸೊರಬ, ಉಮೇಶ್ ಗುಡ್ಡಪ್ಪ ಕೋಡಿಕೊಪ್ಪ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಅವರು ಬಳಸಿದ್ದ ಬೈಕು, ಜಿಂಕೆ ಚರ್ಮ ಹಾಗೂ 3.9 ಕೆಜಿ ಕಾಡು ಹಂದಿ ಮಾಂಸವನ್ನು ಜಪ್ತು ಮಾಡಿದ್ದಾರೆ.
You cannot copy content of this page