ಸಿಲೆಂಡರ್ ಸ್ಪೋಟಿಸಿದ ಪರಿಣಾಮ 11 ಲಕ್ಷ ರೂ ಮೌಲ್ಯದ ಮನೆ ಮುರಿದು ಬಿದ್ದಿದೆ. ಸ್ಪೋಟದ ವೇಳೆ ಭಾರೀ ಪ್ರಮಾಣದ ಸದ್ದು ಕೇಳಿ ಜನ ಹೌಹಾರಿದ್ದಾರೆ.
ಗುರುವಾರ ಬೆಳಗ್ಗೆ ಗೋಕರ್ಣ ಬಳಿಯ ಬಂಗ್ಲೆಗುಡ್ಡದಲ್ಲಿ ಸಿಲೆಂಡರ್ ಸ್ಪೋಟಿಸಿದೆ. ಸ್ಪೋಟದ ತೀವೃತೆಗೆ ಮುರಳಿಧರ್ ಕಾಮತ್ ಅವರ ವಾಸದ ಮನೆ ಮುರಿದು ಬಿದ್ದಿದೆ. ನಂತರ ಹೊತ್ತಿ ಉರಿದ ಜ್ವಾಲೆ ಪಕ್ಕದ ಕಾಡಿಗೂ ವ್ಯಾಪಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಸಾಹಸ ಮಾಡಿದ್ದಾರೆ.
ಸಿಲೆಂಡರ್ ಸ್ಪೋಟದ ಅವಧಿಯಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಪೋಟದ ಸದ್ದು ಕೇಳಿದ ಜನ ಆತಂಕದಲ್ಲಿ ಎಲ್ಲಾ ಕಡೆ ಓಡಾಡಿದ್ದು, ಮನೆ ಹೊತ್ತಿ ಉರಿಯುವುದನ್ನು ನೋಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಡಿದ್ದಾರೆ.
ಛಿದ್ರಗೊಂಡ ಮನೆಯ ಅಕ್ಕ ಪಕ್ಕ ಇನ್ನಷ್ಟು ಜನವಸತಿ ಪ್ರದೇಶಗಳಿದ್ದವು. ಪ್ರವಾಸಿಗರು ತಂಗುವ ಹೊಟೇಲ್ ಸಹ ಆ ಭಾಗದಲ್ಲಿದ್ದು, ಬೆಂಕಿ ಆರಿಸಿದ ಪರಿಣಾಮ ಅಪಾಯ ತಪ್ಪಿದೆ.