`ಸಮೃದ್ಧ ಜೀವನ’ ಎಂಬ ಯೋಜನೆ ಅಡಿ ಹೂಡಿಕೆ ಮಾಡಿದ ಅನೇಕರು ಕಾಸು ಕಳೆದುಕೊಂಡಿದ್ದಾರೆ. ತಮ್ಮ ಹಣ ತಮಗೆ ಮರಳಿಸಿ ಎಂದು ಅವರು ಪಟ್ಟುಹಿಡಿದಿದ್ದು, ಹಣಪಡೆದವರಾರೂ ಕೈಗೆ ಸಿಗುತ್ತಿಲ್ಲ!
ಸಮೃದ್ಧ ಜೀವನ ಮಲ್ಟಿಸ್ಟೇಟ್ ಮಲ್ಟಿ ಪರ್ಪೋಸಸ್ ಕೋ-ಆಪ್ರೇಟಿವ್ ಸೊಸೈಟಿ ಹಾಗೂ ಪುಣೆಯ ಸಮೃದ್ಧ ಜೀವನ ಅಗ್ರೋ ಪ್ರಾಪರ್ಟಿ ಕಂಪನಿ ಲಿಮಿಟೆಡ್ ಸಹಯೋಗದಲ್ಲಿ ಜನರಿಗೆ ಅನ್ಯಾಯ ನಡೆದಿದೆ. ಭಾರತದ ಎಲ್ಲಡೆ ಶಾಖೆ ಹೊಂದಿರುವುದಾಗಿ ನಂಬಿಸಿದ ಈ ಕಂಪನಿ ಜನರಿಂದ ಹಣ ಸಂಗ್ರಹಿಸಿ ಮೋಸ ಮಾಡಿದೆ. ಆರ್‌ಡಿ, ಎಫ್‌ಡಿ, ಎಸ್ ಐ ಪಿ ಸೇರಿ ಹಲವು ಯೋಜನೆಗಳ ಹೆಸರಿನಲ್ಲಿ ಜನರನ್ನು ಯಾಮಾರಿಸಿದೆ. ಲಕ್ಷಾಂತರ ಜನ ಈ ವಂಚನೆಗೆ ಒಳಗಾಗಿದ್ದು, ಸಾಕಷ್ಟು ಹೋರಾಟ ನಡೆಸಿದರೂ ಅವರ ಹಣ ಮಾತ್ರ ಮರಳಿ ಸಿಕ್ಕಿಲ್ಲ
ಕೂಲಿ ಕಾರ್ಮಿಕರು, ನಿವೃತ್ತ ನೌಕರರು, ಮಹಿಳೆಯರು ಸೇರಿ ಬಡವರನ್ನು ಗುರಿಯಾಗಿರಿಸಿಕೊಂಡು ಈ ಸಂಸ್ಥೆ ಹಣ ಸಂಗ್ರಹಿಸಿದೆ. 1600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅವ್ಯವಹಾರ ನಡೆಸಿದೆ. ಸಂಸ್ಥೆ ಮುಖ್ಯಸ್ಥರೇ ಈ ಅಪರಾತಪರ ನಡೆಸಿದ್ದು, ಅವರು ಬಡವರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ಆ ಕಂಪನಿ ಆಸ್ತಿ ಮುಟ್ಟುಗೋಲು ಹಾಕಿ ಸಂತ್ರಸ್ತರ ಹಣ ಮರಳಿಸುವಂತೆ ಒತ್ತಾಯಿಸಿದರೂ ಆ ಕೆಲಸ ನಡೆದಿಲ್ಲ. ಈ ಎಲ್ಲಾ ಹಿನ್ನಲೆ ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದಾರೆ.