ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ಕಾಯ್ದಿಟ್ಟ ಅನುದಾನದ ಅಡಿ ಬಡ ಜನರಿಗೆ ಮನೆ ರಿಪೇರಿ ಮಾಡಿಕೊಡಲು ಸರ್ಕಾರ ಆಸಕ್ತಿವಹಿಸಿದೆ. ಹೊನ್ನಾವರದಲ್ಲಿ ನೂತನವಾಗಿ ರಚಿತವಾಗಿರುವ ಮಂಕಿ ಪಟ್ಟಣ ಪಂಚಾಯತದಲ್ಲಿ ಈ ಯೋಜನೆಗೆ ಅರ್ಜಿ ಹಾಕುವವರೇ ಇಲ್ಲ!
`ಮನೆ ಛಾವಣಿ ಹಾಳಾದವರು ಅರ್ಜಿ ಸಲ್ಲಿಸಿ’ ಎಂದು ಸಕಾರ ಪ್ರಕಟಣೆ ಹೊರಡಿಸಿತ್ತು. ಆದರೆ, ಒಂದು ಅರ್ಜಿ ಸಹ ಈ ಊರಿನಲ್ಲಿ ಸಲ್ಲಿಕೆ ಆಗಿಲ್ಲ. ಹೀಗಾಗಿ `ಮನೆ ಛಾವಣಿ ಹಾಳಾದವರು ಅರ್ಜಿ ಸಲ್ಲಿಸಿ ದುರಸ್ಥಿ ಮಾಡಿಸಿಕೊಳ್ಳಿ’ ಎಂದು ಇದೀಗ ಮತ್ತೊಮ್ಮೆ ಸರ್ಕಾರ ಪ್ರಕಟಣೆ ಹೊರಡಿಸಿದೆ.
2022-23 ನೇ ಸಾಲಿನ ಮುಖ್ಯಮಂತ್ರಿ ಅಮೃತ ನಗರೋತ್ಥಾನ (ಮುನಿಸಿಪಾಲಟಿ) ಯೋಜನೆ ಹಂತ-4 ಯೋಜನೆಯಡಿ ಬಡ ಜನರಿಗೆ ಮನೆ ಛಾವಣಿ ದುರಸ್ಥಿಗೆ ಸರ್ಕಾರದಿಂದಲೇ ಹಣ ಕೊಡಲಾಗುತ್ತದೆ. ಈ ಯೋಜನೆಯ ಬಗ್ಗೆ ಸರ್ಕಾರ ವ್ಯಾಪಕ ಪ್ರಚಾರವನ್ನು ಮಾಡುತ್ತಿದೆ. ಅರ್ಹರನ್ನು ಗುರುತಿಸಿ ಯೋಜನೆಯನ್ನು ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಹೊನ್ನಾವರದ ಮಂಕಿಯಲ್ಲಿ ಮೊದಲ ಬಾರಿ ಹೊರಡಿಸಿದ ಪ್ರಕಟಣೆಗೆ ಸ್ಪಂದನೆ ಸಿಗದ ಹಿನ್ನಲೆ ಫೆ 11ರವರೆಊ ಅವಕಾಶ ಕೋರಿ ಮತ್ತೊಮ್ಮೆ ಅವಕಾಶ ಕೊಟ್ಟಿದೆ.
ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮನೆ ರಿಪೇರಿ ಮಾಡಿಸಿಕೊಳ್ಳಲು ಬಯಸುವವರು ವಿವಿಧ ದೃಢೀಕೃತ ದಾಖಲೆ ಹಾಗೂ ಪ್ರಮಾಣ ಪತ್ರ ಸಲ್ಲಿಸಿದರೆ ಸರ್ಕಾರದ ಈ ಸೌಲಭ್ಯ ಸಿಗಲಿದೆ. ಅರ್ಜಿ ನಮೂನೆ ಜೊತೆ ಇನ್ನೂ ಹೆಚ್ಚಿನ ಮಾಹಿತಿಗೆ ಪಂಚಾಯತಗೆ ಭೇಟಿ ನೀಡುವುದು ಉತ್ತಮ.